ಭಾರತ, ಫೆಬ್ರವರಿ 24 -- 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್​ಗಳ ಐತಿಹಾಸಿಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಅಲ್ಲದೆ, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ ಸೋಲಿನ ಸೇಡು ತೀರಿಸಿಕೊಂಡಿರುವ ಭಾರತ ತಂಡ, ಐಸಿಸಿ ಟೂರ್ನಿಗೆ ಆತಿಥ್ಯ ವಹಿಸಿರುವ ಆತಿಥೇಯರನ್ನು ಟೂರ್ನಿಯಿಂದಲೇ ಹೊರದಬ್ಬಿದೆ. ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ 51ನೇ ಏಕದಿನ ಶತಕ ವೈಭವದ ಎದುರು ಮಂಕಾದ ಪಾಕಿಸ್ತಾನ​, ತನ್ನ ನರಿ ಬುದ್ದಿಯನ್ನು ಮತ್ತೆ ತೋರಿಸಿದೆ ಎಂಬ ಟೀಕೆಗೆ ಗುರಿಯಾಗಿದೆ. ಅದಕ್ಕೆ ಕಾರಣ ಶತಕ ತಪ್ಪಿಸಲು ಪ್ರಯತ್ನಿಸಿದ್ದು ಎನ್ನಲಾಗಿದೆ.

ಪಾಕಿಸ್ತಾನ ವಿರುದ್ಧ ಗೆಲ್ಲಲು 2 ರನ್ ಹಾಗೂ ಶತಕಕ್ಕೆ 4 ರನ್ ಬೇಕಿದ್ದಾಗ ಕೊಹ್ಲಿ ಭರ್ಜರಿ ಬೌಂಡರಿ ಸಿಡಿಸಿ 51ನೇ ಶತಕ ಪೂರೈಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, 49.2 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 241 ರನ್ ಗಳಿಸಿತು. ಈ ಗುರಿ ಬೆನ್ನಟ...