ಭಾರತ, ಜನವರಿ 30 -- 2025ರ ಜನವರಿ 26, ಭಾರತದ ಗಣರಾಜ್ಯೋತ್ಸಕ್ಕೆ ವಜ್ರ ಮಹೋತ್ಸವ ಮುಗಿಸಿದ ಸoಭ್ರಮ. ಗಣರಾಜ್ಯೋತ್ಸವದ ಪರೇಡ್ ಅನ್ನು ಪ್ರೇಕ್ಷಕನಾಗಿ ಕುಳಿತು ನೋಡುವಾಗ ಭಾರತದ ಸೇನೆಯ ಬಲವನ್ನೂ, ದೇಶವನ್ನು ಗಣರಾಜ್ಯವನ್ನಾಗಿಸುವತ್ತ ನಮ್ಮ ಹಿರಿಯರ ಶ್ರಮ ಹಾಗೂ ತ್ಯಾಗವನ್ನೂ ನೆನದಾಗ 'ಭಾರತಾಂಬೆಯೇ ನಿನಗೆ ಜಯ'ವಾಗಲಿ ಎಂಬ ಉದ್ಘೋಷ ದೇಶ ವಾಸಿಗಳೆಲ್ಲರ ಮನದಲ್ಲಿ ಅರಳುವುದು ಸ್ವಾಭಾವಿಕ. ಮಾತೃಭೂಮಿಗೆ ನಮ್ಮ 'ಜೈ' ಕಾರ ಕೇವಲ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯoತಿ, ಗಣರಾಜ್ಯೋತ್ಸವ ಹೀಗೆ ರಾಷ್ಟ್ರೀಯ ಆಚರಣೆಯ ಇಂತಹ ಸಮಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ.

ದೇಶದ ಗಡಿಭಾಗಗಳಲ್ಲಿ ಅದೆಷ್ಟೋ ದೂರಕ್ಕೆ ದೃಷ್ಟಿಯನ್ನಿಟ್ಟು ಮೈಯೆಲ್ಲಾ ಕಣ್ಣಾಗಿ ತಮ್ಮನ್ನು ಆವರಿಸುವ ಏಕಾಂಗಿಭಾವವನ್ನು ಮೆಟ್ಟಿ, ಪ್ರಕೃತಿಯ ವಿಪರೀತ ಪರಿಸ್ಥಿತಿಯಲ್ಲಿಯೂ ದೇಶದ ಗಡಿಯ ರಕ್ಷಣೆಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಸೈನಿಕರ ಸಾಹಸ ನೆನೆದಾಗ, ವಘಾ ಗಡಿಯಲ್ಲಿ ಸಂಜೆ ಸಮಯದಲ್ಲಿ ಸೇರುವ ಜನಸಾಗರದ ಮಧ್ಯೆ ಕುಳಿತು ಅಲ್ಲಿ ನಡೆಯುವ 'ಬೀಟಿಂಗ್ ರೀಟ್ರೀಟ್' ವೀ...