ಭಾರತ, ಮೇ 4 -- ತೂಕ ಇಳಿಸಿಕೊಳ್ಳೋದು ಇತ್ತೀಚೆಗೆ ಹಲವರಿಗೆ ಸವಾಲಾಗಿದೆ. ಇದಕ್ಕಾಗಿ ಕಟ್ಟುನಿಟ್ಟಿನ ಡಯೆಟ್ ಪಾಲಿಸೋದು, ವರ್ಕೌಟ್ ಮಾಡಿ ಬೆವರಿಳಿಸೋದು ಮಾಡುತ್ತಾರೆ. ಆದರೆ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ತೂಕ ಮಾತ್ರ ಕಡಿಮೆ ಆಗುವುದಿಲ್ಲ. ಇದಕ್ಕೆ ಕಾರಣ ಏನು ಎಂದು ಸಾಕಷ್ಟು ತಲೆ ಕೆಡಿಸಿಕೊಳ್ಳುತ್ತಾರೆ. ಅದರ ಬದಲು ನಿಮ್ಮ ಬೆಳಗಿನ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿ. ಬೆಳಿಗ್ಗೆ ಎದ್ದಾಕ್ಷಣ ನಿಮ್ಮ ಕೆಲವು ಹೊತ್ತನ್ನು ಈ ಕೆಲವು ಕ್ರಮಗಳನ್ನು ಅನುಸರಿಸುವ ಸಲುವಾಗಿ ಮೀಸಲಿರಿಸಿ. ಇದರಿಂದ ವೇಗವಾಗಿ ತೂಕ ಇಳಿಕೆಯಾಗುತ್ತದೆ.

ತೂಕ ಇಳಿಕೆಯ ವಿಚಾರಕ್ಕೆ ಬಂದಾಗ ಸಮತೋಲನ, ಚಯಾಪಚಯ ಮತ್ತು ಮೈಂಡ್‌ ಫ್ರೆಶ್ ಆಗಲು ಆದ್ಯತೆ ನೀಡುವ ಕೆಲವು ಸುಸ್ಥಿರ ಅಭ್ಯಾಸಗಳನ್ನು ರೂಪಿಸಿಕೊಳ್ಳುವುದು ಮುಖ್ಯ. ಸಣ್ಣ ಸಣ್ಣ, ದೈನಂದಿನ ಅಭ್ಯಾಸಗಳು ಕೂಡ ಬಹಳ ಮುಖ್ಯವಾಗುತ್ತವೆ ಎನ್ನುತ್ತಾರೆ ಬೆಂಗಳೂರಿನ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ನ್ಯೂಟ್ರಿಷನ್‌ ವಿಭಾಗದ ಮುಖ್ಯಸ್ಥೆ ಶೋಭಾ.

ಪ್ರತಿದಿನ ನಮ್ಮ ಬೆಳಗನ್ನು ದೇಹದ ಕೊಬ್ಬು ಕರಗ...