Bengaluru, ಫೆಬ್ರವರಿ 18 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 17ರ ಸಂಚಿಕೆಯಲ್ಲಿ ವೆಂಕಿ ಮನೆಯಲ್ಲಿ ಇರುವ ವಿಚಾರಕ್ಕೆ ಸಂಬಂಧಿಸಿ ಮತ್ತೆ ಕಿರಿಕಿರಿ ಉಂಟಾಗಿದೆ. ವೆಂಕಿ ಮನೆಯಲ್ಲಿ ಹರೀಶ್ ಮತ್ತು ಸಿಂಚನಾ ಭಾಗ ಮಾಡಿರುವ ಜಾಗದಲ್ಲಿ ವೆಂಕಿ ಮತ್ತು ಚೆಲ್ವಿ ಮಲಗಲು ಮುಂದಾಗಿದ್ದಾರೆ. ಚಾಪೆ ಹಾಕುತ್ತಿರುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಸಂತೋಷ್, ಈ ಮನೆಯಲ್ಲಿ ನೀವಿಬ್ಬರೂ ಮಲಗುವಂತಿಲ್ಲ. ಈ ಮನೆಯಲ್ಲಿ ನಿಮಗೆ ಯಾವುದೇ ಹಕ್ಕಿಲ್ಲ, ಕೂಡಲೇ ಇಲ್ಲಿಂದ ಹೊರಡಿ ಎಂದು ಜೋರು ಮಾಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಸಿಂಚನಾ, ನೀವು ನನ್ನ ಮನೆಯ ಭಾಗದಲ್ಲಿ ಮಲಗಿದ್ದೀರಿ, ಇಲ್ಲಿಂದ ಎದ್ದು ಹೋಗಿ ಎಂದು ಎಬ್ಬಿಸಲು ಮುಂದಾಗುತ್ತಾನೆ. ಅದಕ್ಕೆ ಸಂತೋಷ್ ಕೂಡ ದನಿಗೂಡಿಸುತ್ತಾನೆ. ಅಷ್ಟೇ ಅಲ್ಲದೆ, ಬೇಕಾದರೆ ಮನೆಯಿಂದ ಹೊರಗೆ ಹೋಗಿ ಎಲ್ಲಾದರೂ ಬೀದಿಯಲ್ಲಿ ಮಲಗಿಕೊಳ್ಳಿ ಎಂದು ಹೇಳುತ್ತಾನೆ. ಅವರ ಮಾತು ಕೇಳಿ ಚೆಲ್ವಿ ಮತ್ತು ವೆಂಕಿಗೆ ತೀವ್ರ ಸಂಕಟವಾಗುತ್ತದೆ.

ಸಂತೋಷ್ ಮತ್ತು ಹರೀಶ್ ಸೇರಿಕೊಂ...