Bengaluru, ಏಪ್ರಿಲ್ 9 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಏಪ್ರಿಲ್ 8ರ ಸಂಚಿಕೆಯಲ್ಲಿ ಜಯಂತ, ಲಕ್ಷ್ಮೀ ನಿವಾಸದಿಂದ ಹೊರಟು ಮನೆಗೆ ಮರಳಿದ್ದಾನೆ. ಮನೆಗೆ ಹೋಗುವೆ ಎಂದು ಅವನು ಹೇಳಿದಾಗ, ಮನೆಯವರು ಅವನನ್ನು ಕಳುಹಿಸಲು ಒಪ್ಪಿಲ್ಲ. ಆದರೆ ಜಯಂತ ಮಾತ್ರ, ಮನೆಯಲ್ಲಿ ಸ್ವಲ್ಪ ಕೆಲಸವಿದೆ ಎಂದು ಹೇಳಿ ಹೋಗಿದ್ದಾನೆ, ಮನೆಯವರು ಭಾರವಾದ ಮನಸ್ಸಿನಿಂದ ಅವನನ್ನು ಕಳುಹಿಸಿಕೊಟ್ಟಿದ್ದಾರೆ. ಮನೆಗೆ ಹೋದ ಜಯಂತ, ಜಾಹ್ನವಿ ನೆನಪಿನಲ್ಲೇ ದಿನ ಕಳೆದಿದ್ದಾನೆ. ಜಾಹ್ನವಿಯ ಹಾಡಿನ ರೆಕಾರ್ಡಿಂಗ್ ಕೇಳಿದ್ದಾನೆ, ಅವಳ ಹಳೆಯ ಫೋಟೊ ನೋಡಿದ್ದಾನೆ. ನಂತರ ಮದುವೆಯ ಫೋಟೊಗಳನ್ನು ನೋಡಿ ಮರುಕಪಟ್ಟುಕೊಂಡಿದ್ದಾನೆ. ಅಷ್ಟರಲ್ಲಿ ಅವನ ಕಣ್ಣ ಮುಂದೆ ಜಾಹ್ನವಿ ಸಮುದ್ರಕ್ಕೆ ಹಾರಿದ ದೃಶ್ಯ ಅವನ ನೆನಪಿಗೆ ಬಂದಿದೆ. ಹೀಗಾಗಿ ಜಯಂತ ಮಂಕಾಗಿ ಅಲ್ಲೇ ಕುಳಿತಿದ್ದಾನೆ.

ಮತ್ತೊಂದೆಡೆ ಸಿದ್ದೇಗೌಡ, ಮನೆಯಲ್ಲಿ ಮರಿಗೌಡನ ಜೊತೆ ಮಾತುಕತೆ ನಡೆಸಿದ್ದಾನೆ. ನನ್ನ ಬದಲಿಗೆ ಜೈಲಿಗೆ ಹೋಗಿರುವ ವ್ಯಕ್ತಿಯನ್ನು ನಾನೊಮ್ಮೆ ನೋಡಬೇಕು, ಮಾ...