Bengaluru, ಫೆಬ್ರವರಿ 15 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ಮನೆಯಲ್ಲೇ ಕುಳಿತುಕೊಂಡಿರುವ ವೆಂಕಿಯನ್ನು ಹೇಗಾದರೂ ಮಾಡಿ ಮನೆಯಿಂದ ಹೊರಹಾಕಬೇಕು ಎಂದು ಸಂತೋಷ್ ಮತ್ತು ಹರೀಶ ಸಂಚು ರೂಪಿಸುತ್ತಿದ್ದಾರೆ. ವೆಂಕಿ ಮಾತ್ರ ಮನೆ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ ಎಂದು ಶಪಥ ಮಾಡಿದ್ದಾನೆ. ಮನೆಯ ಹೊರಗಡೆ ಮಾತನಾಡುತ್ತಾ ಕುಳಿತಿದ್ದ ಸಂತೋಷ್ ಮತ್ತು ಹರೀಶ, ಈಗ ಸಿಂಚನಾಳನ್ನು ಮನೆ ಬಿಟ್ಟು ಹೋಗುವುದನ್ನು ತಡೆಯಬೇಕು ಎಂದು ಯೋಚಿಸುತ್ತಿರುತ್ತಾನೆ. ಸಂತೋಷ್ ಕೂಡ, ಮೊದಲು ನೀನು ಅವಳನ್ನು ಮನೆಯಲ್ಲಿ ಉಳಿಸಿಕೋ, ಇಲ್ಲದಿದ್ದರೆ ಮತ್ತೆ ಸಮಸ್ಯೆಯಾಗುತ್ತದೆ, ನಂತರ ವೆಂಕಿಯನ್ನು ಮನೆಯಿಂದ ಓಡಿಸಲು ಸಂಚು ಮಾಡೋಣ ಎಂದು ಹೇಳುತ್ತಾನೆ. ಅದರಂತೆ ಹರೀಶ, ಸಿಂಚನಾ ಬಳಿ ತೆರಳಿ ನಾಟಕ ಮಾಡುತ್ತಾನೆ. ನಾನಿನ್ನು ಒಂದು ಕ್ಷಣವೂ ಮನೆಯಲ್ಲಿ ಇರಲ್ಲ ಎಂದು ಸಿಂಚನಾಳ ಮನ ಒಲಿಸಿ, ಎರಡೇ ದಿನದಲ್ಲಿ ವೆಂಕಿಯನ್ನು ಓಡಿಸುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಸಿಂಚನಾ ಒಪ್ಪಿ, ಸರಿ ಎಂದು ಹ...