ಭಾರತ, ಮಾರ್ಚ್ 2 -- ವೃಷಭ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಕೃತ್ತಿಕಾ ನಕ್ಷತ್ರದ 2, 3 ಮತ್ತು 4ನೇ ಪಾದಗಳು, ರೋಹಿಣಿ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಮೃಗಶಿರ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ವೃಷಭ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಇ, ಉ, ಎ ಆದಲ್ಲಿ ಕೃತ್ತಿಕ ನಕ್ಷತ್ರ. ಒ, ವ, ವಿ, ವು ಆದಲ್ಲಿ ರೋಹಿಣಿ ನಕ್ಷತ್ರ ಮತ್ತು ವೆ, ವೊ ಆದಲ್ಲಿ ಮೃಗಶಿರ ನಕ್ಷತ್ರದೊಂದಿಗೆ ಮೇಷ ರಾಶಿಗೆ ಬರುತ್ತದೆ. ನಂದಿ ಅಥವಾ ಗೂಳಿ ಈ ರಾಶಿಯ ಚಿಹ್ನೆ. ಈ ರಾಶಿಗೆ ಸೇರಿದವರು ಸಾಮಾನ್ಯವಾಗಿ ಪ್ರಾಮಾಣಿಕರು ಆದರೆ ಸ್ವಭಾವ ತುಸು ಮೊಂಡು. ಎದುರಿಗೆ ಇರುವವರಿಂದಲೂ ಪ್ರಾಮಾಣಿಕತೆಯನ್ನು ನಿರೀಕ್ಷಿಸುತ್ತಾರೆ.

ವೃಷಭ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಧೈರ್ಯ ಮತ್ತು ಆತ್ಮಶಕ್ತಿ ವಿಶೇಷವಾಗಿರುತ್ತದೆ. ದೈಹಿಕವಾಗಿಯೂ ಸಬಲರಾಗಿರುತ್ತಾರೆ. ಸಹನೆ ಮತ್ತು ಏಕಾಗ್ರತೆಗೆ ಇವರೇ ನಿಜವಾದ ಮಾದರಿ. ಪ್ರೀತಿ ಮತ್ತು ವಿಶ್ವಾಸದ ವಿಚಾರದಲ್ಲಿ ಇವರಿಗೆ ಬೇರಾರು ಸಮರಲ್ಲ. ಸಂಗಾತಿಯೊಂದಿಗೆ ಅರ್ಥಪೂರ್ಣ ಜೀ...