Bengaluru, ಏಪ್ರಿಲ್ 26 -- ರವಿ ಅಥವಾ ಸೂರ್ಯ ಮೇ 14 ರ ಬುಧವಾರದಂದು ವೃಷಭರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ ತಿಂಗಳ 15 ರ ಭಾನುವಾರದವರೆಗು ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ವೃಷಭ ರಾಶಿಯು ಹಣಕಾಸಿನ ವ್ಯವಹಾರವನ್ನು ಸೂಚಿಸುತ್ತದೆ. ಕುಟುಂಬದ ಹಿರಿಯರನ್ನು ಸೂಚಿಸುತ್ತದೆ. ಅಲ್ಲದೆ ಪತ್ನಿಯಿಂದ ಪತಿಗೆ ದೊರೆಯಬಹುದಾದ ಸಹಾಯವನ್ನು ಸೂಚಿಸುತ್ತದೆ. ಜನ್ಮ ಕುಂಡಲಿಯಲ್ಲಿ ರವಿ ಮತ್ತು ಶುಕ್ರರು ಶುಭವಾಗಿದ್ದಲ್ಲಿ ಶುಭಫಲಗಳು ಹೆಚ್ಚಿನ ಮಟ್ಟದಲ್ಲಿ ದೊರೆಯುತ್ತದೆ. ಸಾಮಾಜಿಕ ರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ದೊರೆಯುತ್ತವೆ. ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಯಾವುದೇ ವಿಚಾರದಲ್ಲಿಯೂ ನಿರ್ದಿಷ್ಟವಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಮನಸ್ಸಿಗೆ ಇಷ್ಟವನಿಸುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳುವಿರಿ. ಹಣದ ಕೊರತೆ ಕಂಡು ಬರುತ್ತದೆ. ಆದರೆ ಅನಿರೀಕ್ಷಿತ ಧನ ಲಾಭವಿರುತ್ತದ...