Bengaluru, ಏಪ್ರಿಲ್ 26 -- ರವಿ ಅಥವಾ ಸೂರ್ಯ ಮೇ 14 ರ ಬುಧವಾರದಂದು ವೃಷಭರಾಶಿಯನ್ನು ಪ್ರವೇಶಿಸುತ್ತಾನೆ. ಜೂನ್ ತಿಂಗಳ 15 ರ ಭಾನುವಾರದವರೆಗು ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ವೃಷಭ ರಾಶಿಯು ಹಣಕಾಸಿನ ವ್ಯವಹಾರವನ್ನು ಸೂಚಿಸುತ್ತದೆ. ಕುಟುಂಬದ ಹಿರಿಯರನ್ನು ಸೂಚಿಸುತ್ತದೆ. ಅಲ್ಲದೆ ಪತ್ನಿಯಿಂದ ಪತಿಗೆ ದೊರೆಯಬಹುದಾದ ಸಹಾಯವನ್ನು ಸೂಚಿಸುತ್ತದೆ. ಜನ್ಮ ಕುಂಡಲಿಯಲ್ಲಿ ರವಿ ಮತ್ತು ಶುಕ್ರರು ಶುಭವಾಗಿದ್ದಲ್ಲಿ ಶುಭಫಲಗಳು ಹೆಚ್ಚಿನ ಮಟ್ಟದಲ್ಲಿ ದೊರೆಯುತ್ತದೆ. ಸಾಮಾಜಿಕ ರಂಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ದೊರೆಯುತ್ತವೆ. ವೃಷಭ ರಾಶಿಯಲ್ಲಿ ಸೂರ್ಯನ ಸಂಕ್ರಮಣದಿಂದ ಮೇಷ, ವೃಷಭ, ಮಿಥುನ ಹಾಗೂ ಕಟಕ ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ ಎಂಬುದನ್ನು ಇಲ್ಲಿ ತಿಳಿಯಿರಿ.

ಮೌನ ತೊರೆದು ಮಾತನಾಡಿದರೆ ದೊರೆಯಬೇಕಾದ ಅನುಕೂಲತೆಗಳು ದೊರೆಯುತ್ತವೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಗೆ ಆತ್ಮೀಯರ ಸಹಾಯ ಸಹಕಾರವನ್ನು ಪಡೆಯುತ್ತಾರೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಆತುರಪಡದೆ ಆತ್ಮವಿಶ್ವಾಸದಿಂ...