ಭಾರತ, ಮಾರ್ಚ್ 5 -- ವೃಶ್ಚಿಕ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ವಿಶಾಖ ನಕ್ಷತ್ರದ 4ನೇ ಪಾದ, ಅನುರಾಧ ನಕ್ಷತ್ರದ 1,2,3 ಮತ್ತು 4ನೇ ಪಾದಗಳು, ಜ್ಯೇಷ್ಠ ನಕ್ಷತ್ರದ 1,2,3 ಮತ್ತು 4ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ವೃಶ್ಚಿಕ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ತೊ ಆದಲ್ಲಿ ವಿಶಾಖ ನಕ್ಷತ್ರ, ನ, ನಿ, ನು ಮತ್ತು ನೆ ಆದಲ್ಲಿ ಅನುರಾಧಾ ನಕ್ಷತ್ರ ಹಾಗೂ ನೊ, ಯ, ಯಿ ಮತ್ತು ಯು ಆದಲ್ಲಿ ಜ್ಯೇಷ್ಠ ನಕ್ಷತ್ರ ಹಾಗೂ ವೃಶ್ಚಿಕ ರಾಶಿ ಆಗುತ್ತದೆ. ಸ್ನೇಹ ಗುಣದ ವೃಶ್ಚಿಕ ರಾಶಿಯವರು ನೋವನ್ನು ನುಂಗಿ ನಗುವಿನ ಮುಖವಾಡ ಧರಿಸಿರುತ್ತಾರೆ. ಏಕಾಂತವನ್ನು ಇಷ್ಟಪಡುವ ಇವರಲ್ಲಿ ಹಾಸ್ಯಮನೋಭಾವ ತುಂಬಿರುತ್ತದೆ. ಜಗಳವಾಡಿದಷ್ಟೇ ಬೇಗ ಪ್ರೀತಿಯನ್ನೂ ಮಾಡುತ್ತಾರೆ. ಸಾಧಿಸುವ ಛಲವೇ ಇವರ ಯಶಸ್ಸಿನ ಅಸ್ತ್ರ.

ವೃಶ್ಚಿಕ ರಾಶಿಯಲ್ಲಿ ಜನಿಸಿದ ಮಹಿಳೆಯರಿಗೆ ಸ್ನೇಹಮಯ ವ್ಯಕ್ತಿತ್ವವಿರುತ್ತದೆ. ಕೇವಲ ಕುಟುಂಬದವರನ್ನು ಮಾತ್ರವಲ್ಲದೆ ಹೊರಗಿನವರನ್ನು ಸಹ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ಸಮಾಜದಲ್ಲಿ ಜನಪ್ರಿಯತೆ ಮತ್ತು ಉನ್...