ಭಾರತ, ಮಾರ್ಚ್ 21 -- Veera Dheera Sooran Trailer: ಬಹುನಿರೀಕ್ಷಿತ ವೀರ ಧೀರ ಶೂರನ್‌ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಚಿಯಾನ್‌ ವಿಕ್ರಮ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಸಿನಿಮಾದ ಟ್ರೈಲರ್‌ ಬಿಡುಗಡೆ ಮಾಡಲಾಗಿದೆ. ಈ ಸಾಹಸಭರಿತ ಥ್ರಿಲ್ಲರ್‌ ಸಿನಿಮಾದ ಟ್ರೈಲರ್‌ ವೀಕ್ಷಕರಲ್ಲಿ ಸಿನಿಮಾದ ಕುರಿತು ಕುತೂಹಲ ಹೆಚ್ಚಿಸಿದೆ. ಅಂದಹಾಗೆ ವೀರ ಧೀರ ಶೂರನ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಮಾರ್ಚ್‌ 27, 2025ರಂದು ಬಿಡುಗಡೆಯಾಗಲಿದೆ.

ಈ ಟ್ರೈಲರ್‌ 1 ನಿಮಿಷ 45 ಸೆಕೆಂಡ್‌ನ ಅವಧಿಯದ್ದಾಗಿದೆ. ಈ ಸಿನಿಮಾದಲ್ಲಿ ಕೊಂಚ ಭಾವನಾತ್ಮಕ ಅಂಶಗಳು, ಸಾಕಷ್ಟು ಸಾಹಸಮಯ ಕ್ಷಣಗಳು ಇವೆ. ಕೊನೆಗೆ ಚಿಯಾನ್‌ ಸಣ್ಣ ಚಡ್ಡಿ ತೊಟ್ಟು ಅರೆಬೆತ್ತಲೆ ಮೈಯಲ್ಲಿ ಎಂಟ್ರಿ ನೀಡಿರುವುದು ಕಾಣಿಸುತ್ತದೆ. ಈ ಸಿನಿಮಾದ ಮೂಲಕ ನಟ ಸೂರಜ್‌ ವೆಂಜರಮೂಡು ಅವರು ತಮಿಳು ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.

ಈ ಟ್ರೈಲರ್‌ನಲ್ಲಿ ಪೊಲೀಸ್‌ ಡ್ರೆಸ್‌ನಲ್ಲಿ ಎಸ್‌ಜೆ ಸೂರ್ಯ ಕಾಣಿಸಿದ್ದ...