ಭಾರತ, ಏಪ್ರಿಲ್ 19 -- ವೀರ ಚಂದ್ರಹಾಸ ಸಿನಿಮಾ ವಿಮರ್ಶೆ: ರವಿ ಬಸ್ರೂರು ತಮ್ಮ ನಿರ್ದೇಶನದ ಪ್ರತೀ ಚಿತ್ರದಲ್ಲೂ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಬಾರಿ ವಿಶ್ವ ಸಿನಿಮಾದಲ್ಲೇ ಮೊದಲ ಬಾರಿಗೆ ಯಕ್ಷಗಾನವನ್ನು ತೆರೆಯ ಮೇಲೆ ತರುವುದಷ್ಟೇ ಅಲ್ಲ, ಬಹಳ ಜನಪ್ರಿಯವಾದ ಪ್ರಸಂಗವನ್ನು ಸಿನಿಮಾ ಮಾಡಿದ್ದಾರೆ. ಚಂದ್ರಹಾಸನ ಕಥೆ ಹೊಸದೇನಲ್ಲ. ಈಗಾಗಲೇ ಕೆಲವು ದಶಕಗಳ ಹಿಂದೆಯೇ ಚಂದ್ರಹಾಸನ ಕುರಿತು ಚಿತ್ರವೊಂದು ಬಂದಿದೆ. ಹೀಗಿರುವಾಗ, ಈ 'ವೀರ ಚಂದ್ರಹಾಸ' ಎಷ್ಟು ವಿಭಿನ್ನ? ನೀವೇ ನೋಡಿ.

ಕುಂತಳ ಸಾಮ್ರಾಜ್ಯದ ಮಹಾಮಂತ್ರಿಯಾದ ದುಷ್ಟಬುದ್ಧಿಗೆ, ಸಾಮ್ರಾಟನಾಗಬೇಕೆಂಬ ಆಸೆ ಇರುತ್ತದೆ. ಹೀಗಿರುವಾಗಲೇ, ಅನಾಥ ಬಾಲಕ ಚಂದ್ರಹಾಸ ಮುಂದೊಂದು ದಿನ ಸಾಮ್ರಾಟನಾಗುತ್ತಾನೆ ಎಂಬ ಭವಿಷ್ಯ ದುಷ್ಟಬುದ್ಧಿಗೆ ತಿಳಿಯುತ್ತದೆ. ಇದರಿಂದ ಸಿಟ್ಟಾಗುವ ದುಷ್ಟಬುದ್ಧಿ, ಚಂದ್ರಹಾಸನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ, ಕಟುಕರಿಂದ ಪಾರಾಗುವ ಚಂದ್ರಹಾಸ, ರಾಜವಂಶದಲ್ಲಿ ಬೆಳೆಯುತ್ತಾನೆ. ಹಲವು ವರ್ಷಗಳ ನಂತರ ಪುನಃ ದುಷ್ಟಬುದ್ಧಿ ಮತ್ತು ಚಂದ...