ಭಾರತ, ಏಪ್ರಿಲ್ 3 -- Veera Chandrahasa Movie: ವೀರ ಚಂದ್ರಹಾಸ ಸಿನಿಮಾ ಏಪ್ರಿಲ್‌ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ರವಿ ಬಸ್ರೂರು ಅವರ ಕನಸಿನ ಕೂಸು. ಇವರ ನಿರ್ದೇಶನದ ಆರನೇ ಚಿತ್ರ. ಯಕ್ಷಗಾನವನ್ನು ಬೆಳ್ಳಿ ತೆರೆಮೇಲೆ ತೋರಿಸುವ ವಿಶಿಷ್ಟ ಪ್ರಯತ್ನ ಇದಾಗಿದೆ. ಇದು ಕುಂತಲ ರಾಜ್ಯದ ರಾಜ ಚಂದ್ರಹಾಸನ ಕಥೆಯನ್ನು ಹೊಂದಿದೆ. ಈತನ ಕಥೆಯನ್ನು ಯಕ್ಷಗಾನ ಶೈಲಿಯಲ್ಲಿ ಹೇಳುವ ಪ್ರಯತ್ನವನ್ನು ಈ ಚಿತ್ರ ಮಾಡಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌ ರೋಮಾಂಚನಕಾರಿಯಾಗಿ ಕಾಣಿಸಿದೆ. ತನ್ನ ಚಿತ್ರದ ಕುರಿತು ಒಟಿಟಿಪ್ಲೇಗೆ ನೀಡಿದ ಸಂದರ್ಶನದಲ್ಲಿ ರವಿ ಬಸ್ರೂರು ಮಾತನಾಡಿದ್ದಾರೆ.

"ಈ ನನ್ನ ಕನಸಿನ ಪ್ರಾಜೆಕ್ಟ್‌ ಕುರಿತು ಒಂದು ದಶಕಗಳಿಂದಲೂ ಹೆಚ್ಚು ಕಾಲ ನಾನು ತೊಡಗಿಸಿಕೊಂಡಿದ್ದೇನೆ. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ವಸ್ತ್ರವನ್ನು ಜಗತ್ತಿನಾದ್ಯಂತ ಕೊಂಡೊಯ್ಯುವ ಕನಸಿನ ಯೋಜನೆ ಇದಾಗಿದೆ. ಚಂದ್ರಹಾಸನ ಕಥೆ ಸಾಕಷ್ಟು ಆಕರ್ಷಕವಾಗಿದೆ. ಬಿಕ್ಷುಕನಿಂದ ರಾಜನಾಗುವ ತನಕ ಸೊಗಸಾದ ಕಥೆಯನ್ನು ಹೊಂದಿದೆ. ಕುರುಕ್ಷೇತ...