Bangalore, ಏಪ್ರಿಲ್ 12 -- ರವಿ ಬಸ್ರೂರು ಅವರ ಮಹಾತ್ವಕಾಂಕ್ಷೆಯ ವೀರ ಚಂದ್ರಹಾಸ ಸಿನಿಮಾ ಬಿಡುಗಡೆಯಾಗಲು ದಿನಗಣನೆ ಆರಂಭವಾಗಿದೆ. ಶಿವರಾಜ್‌ ಕುಮಾರ್‌, ಚಂದನ್‌ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರವಿ ಬಸ್ರೂರು ಕಿಚ್ಚ ಸುದೀಪ್‌ ಯಕ್ಷಗಾನದ ಕಿರೀಟ ಧರಿಸಿರುವ ಪೋಸ್ಟರ್‌ ಬಿಡುಗಡೆ ಮಾಡಿ ಕಿಚ್ಚನ ಅಭಿಮಾನಿಗಳಿಗೆ ರೋಮಾಂಚನ ಉಂಟು ಮಾಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಸುದೀಪ್‌ ನಟಿಸುತ್ತಿಲ್ಲ. ಆದರೆ, ಇಂದು ಸಂಜೆ ಆರು ಗಂಟೆಗೆ ಸುದೀಪ್‌ ವೀರ ಚಂದ್ರಹಾಸದ ಸ್ಟ್ರೋಮ್‌ (ಬಿರುಗಾಳಿ) ಎಬ್ಬಿಸಲು ಬರುತ್ತಿದ್ದಾರೆ ಎಂದು ರವಿ ಬಸ್ರೂರು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ವೀರ ಚಂದ್ರಹಾಸ ಸಿನಿಮಾದ ಪೋಸ್ಟರ್‌ನಲ್ಲಿ ಸುದೀಪ್‌ ಮಂದಹಾಸ ಬೀರುತ್ತಿದ್ದಾರೆ. ರವಿ ಬಸ್ರೂರು ಇನ್‌ಸ್ಟಾಗ್ರಾಂನಲ್ಲಿ ಹೀಗೆ ಬರೆದಿದ್ದಾರೆ. "ಅಪಾರವಾದ ಹೆಮ್ಮೆ ಮತ್ತು ಕೃತಜ್ಞತೆಯೊಂದಿಗೆ ನಾವು ನಮ್ಮ ಮಹಾನ್ ಕೃತಿ "ವ...