Bengaluru, ಮಾರ್ಚ್ 15 -- Dr Vishnuvardhan: ವಿಷ್ಣುವರ್ಧನ್‌ ಮತ್ತು ದ್ವಾರಕೀಶ್‌ ಕನ್ನಡ ಚಿತ್ರರಂಗದಲ್ಲಿ 'ಆಪ್ತಮಿತ್ರ'ರೆಂದು ಗುರುತಿಸಿಕೊಂಡವರು. ಇಬ್ಬರೂ ಜೊತೆಯಾಗಿ ಹಲವು ಚಿತ್ರಗಳಲ್ಲಿ ನಟಿಸಿದರೆ, ದ್ವಾರಕೀಶ್ ನಿರ್ಮಾಣದ ಹಲವು ಚಿತ್ರಗಳಲ್ಲಿ ವಿಷ್ಣುವರ್ಧನ್‍ ನಾಯಕನಾಗಿ ನಟಿಸಿದ್ದರು. ಜೊತೆಗೆ ಅಷ್ಟು ಚಿತ್ರಗಳನ್ನು ಮಾಡಿದ್ದರೂ, ಇಬ್ಬರ ಸಂಬಂಧ ಸರಳವಾಗೇನೂ ಇರಲಿಲ್ಲ. ಇಬ್ಬರೂ ಸಾಕಷ್ಟು ಬಾರಿ ಜಗಳವಾಡಿಕೊಂಡು ದೂರಾಗಿದ್ದಾರೆ. ಮತ್ತೆ ಹತ್ತಿರವಾಗಿ ಜೊತೆಗೆ ಚಿತ್ರಗಳನ್ನು ಮಾಡಿದ್ದಾರೆ. ಇಬ್ಬರೂ ಜಗಳ ಆಡುತ್ತಿದ್ದುದು ಯಾಕೆ?

ಈ ವಿಷಯವಾಗಿ ಹಿರಿಯ ನಿರ್ದೇಶಕ ಭಾರ್ಗವ, ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ವಿಷ್ಣುವರ್ಧನ್‍ ಮತ್ತು ದ್ವಾರಕೀಶ್‍ ಇಬ್ಬರನ್ನೂ ಬಹಳ ಹತ್ತಿರದಿಂದ ನೋಡಿದವರು ಅವರು. ವಿಷ್ಣುವರ್ಧನ್‍ ಒಳ್ಳೆಯ ಸ್ನೇಹಿತನಾದರೆ, ದ್ವಾರಕೀಶ್‍ ಸಂಬಂಧಿ. ಇಬ್ಬರ ಜೊತೆಗೂ ಭಾರ್ಗವ ಅವರಿಗೆ ಒಳ್ಳೆಯ ಗೆಳೆತನ ಇತ್ತು. ಇಬ್ಬರು ದೂರಾದಾಗಲೂ, ಭಾರ್ಗವ ಜೊತೆಗಿನ ಸಂಬಂಧ ಮಾತ್ರ ಹಳಸಲಿಲ್ಲ. ಇಷ್ಟಕ್ಕೂ ವಿಷ್ಣುವರ್ಧ...