ಭಾರತ, ಮಾರ್ಚ್ 3 -- ವಿಶ್ವ ವನ್ಯಜೀವಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಿರ್ ಅರಣ್ಯಕ್ಕೆ ಭೇಟಿ ನೀಡಿದರು.

ಭಾನುವಾರ (ಮಾ,2) ಸಂಜೆ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಸಾಸನ್‌ನ ಸಿಂಗ್ ಸಾಸನ್ ಎಂಬ ಅರಣ್ಯ ಅತಿಥಿ ಗೃಹದಲ್ಲಿ ರಾತ್ರಿ ಕಳೆದರು.

ಸಿಂಗ್ ಸದನದಲ್ಲಿ ವಾಸ್ತವ್ಯದ ನಂತರ, ಪಿಎಂ ಮೋದಿ ಸಚಿವರು ಮತ್ತು ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಿಂಹ ಸಫಾರಿಗೆ ತೆರಳಿದರು.

"ಇಂದು, ವಿಶ್ವ ವನ್ಯಜೀವಿ ದಿನದಂದು, ನಮ್ಮ ಗ್ರಹದ ನಂಬಲಾಗದ ಜೀವವೈವಿಧ್ಯತೆಯನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸೋಣ.‌ ಪ್ರಕೃತಿಯಲ್ಲಿ ಪ್ರತಿಯೊಂದು ಪ್ರಭೇದವು ಪ್ರಮುಖ ಪಾತ್ರ ವಹಿಸುತ್ತದೆ. ಮುಂದಿನ ಪೀಳಿಗೆಗಾಗಿ ಅವುಗಳ ಭವಿಷ್ಯವನ್ನು ರಕ್ಷಿಸೋಣ. ವನ್ಯಜೀವಿಗಳನ್ನು ಸಂರಕ್ಷಿಸಲು ಭಾರತದ ಕೊಡುಗೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ" ಎಂದು ಮೋದಿ ಬರೆದುಕೊಂಡಿದ್ದಾರೆ.

ಏಷ್ಯಾಟಿಕ್ ಸಿಂಹಗಳ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಪ್ರಾಜೆಕ್ಟ್ ಲಯ...