ಭಾರತ, ಮೇ 4 -- ಬದುಕಿನಲ್ಲಿ ಅದೆಷ್ಟೇ ನೋವಿರಲಿ, ದುಃಖವಿರಲಿ ಮುಖದಲ್ಲಿ ಮೂಡುವ ಈ ಒಂದು ಸಣ್ಣ ನಗು ಈ ಎಲ್ಲವನ್ನೂ ಮರೆಸಿ, ಹೊಸ ಪ್ರಪಂಚವನ್ನೇ ತೋರಿಸುತ್ತದೆ. ನಗು ಎಂಬುದು ಒಂದು ದಿವ್ಯೌಷಧಿಯಂತೆ. ನಾವು ನಗುವ ಜೊತೆಗೆ ಬೇರೆಯವರನ್ನೂ ನಗಿಸುತ್ತಾ ಬಾಳಬೇಕು. ನಗು ಸಹಜ ಧರ್ಮ, ನಗಿಸುವುದು ಪರಧರ್ಮ ಎನ್ನುವ ನಾಣ್ಣುಡಿಯೇ ಇದೆ. ನಗು ನೋವು ಮರೆಸುವ ಶಕ್ತಿ ಮಾತ್ರವಲ್ಲ, ಇದು ನಮ್ಮ ಯೋಗಕ್ಷೇಮವನ್ನೂ ಸುಧಾರಿಸುತ್ತದೆ. ಮಾನಸಿಕ ಆರೋಗ್ಯ ವೃದ್ಧಿಗೂ ನಗು ಬೇಕೇ ಬೇಕು. ನಮ್ಮ ಒಟ್ಟಾರೆ ಆರೋಗ್ಯ ಸುಧಾರಣೆಗೂ ನಗು ಮುಖ್ಯ. ನಗುವಿನ ಮಹತ್ವ ಹಾಗೂ ನಗುವಿನ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಮೇ ತಿಂಗಳ ಮೊದಲ ಭಾನುವಾರವನ್ನು ವಿಶ್ವ ನಗುವಿನ ದಿನ ಎಂದು ಆಚರಿಸಲಾಗುತ್ತದೆ. ಈ ವರ್ಷ ಮೇ 4 ರಂದು ವಿಶ್ವ ನಗುವಿನ ದಿನವಿದೆ.

ನಗುತ್ತಾ, ನಗಿಸುತ್ತಾ ಬದುಕು ಸಾಗಿಸುವ ಸಂಕಲ್ಪ ಮಾಡುವ ಮುನ್ನ ವಿಶ್ವ ನಗು ದಿನದ ಇತಿಹಾಸ, ಮಹತ್ವ ತಿಳಿಯಿರಿ.

ಪ್ರತಿವರ್ಷ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗುವಿನ ದಿನವನ್ನು ...