ಭಾರತ, ಮಾರ್ಚ್ 21 -- 2025ರ ಜೂನ್ 20ರಿಂದ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ನಾಲ್ಕನೇ ಆವೃತ್ತಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಚಿಂತನೆ ನಡೆಸಿದೆ. ಹೊಸ ಬೋನಸ್ ಅಂಕಗಳ ವ್ಯವಸ್ಥೆಯನ್ನು ಅಳವಡಿಸಲು ಐಸಿಸಿ ಚರ್ಚೆ ನಡೆಸುತ್ತಿದೆ. ಏಪ್ರಿಲ್ನಲ್ಲಿ ಆಡಳಿತ ಮಂಡಳಿ ಸಭೆ ನಡೆಯಲಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೊಸ ವ್ಯವಸ್ಥೆಯ ಪ್ರಕಾರ ದೊಡ್ಡ ಅಂತರದಿಂದ ಗೆಲ್ಲುವ ತಂಡಗಳಿಗೆ ಬೋನಸ್ ಅಂಕ ನೀಡುವುದಾಗಿದೆ.
ಡಬ್ಲ್ಯುಟಿಸಿಯ ಮೂರನೇ ಆವೃತ್ತಿಯು ಇಂಗ್ಲೆಂಡ್ನ ಲಾರ್ಡ್ಸ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ನೊಂದಿಗೆ ಕೊನೆಗೊಳ್ಳಲಿದೆ. ಆದಾಗ್ಯೂ, ಲೀಗ್ ಹಂತದಲ್ಲಿ ಅಪಾರದರ್ಶಕ ಮತ್ತು ಅನ್ಯಾಯದ ವ್ಯವಸ್ಥೆಯಿಂದಾಗಿ ಐಸಿಸಿ ಟೀಕೆಗೆ ಗುರಿಯಾಗಿತ್ತು. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025 ರಿಂದ 2027ರ ಅವಧಿ ಹೊಂದಿದೆ. ಜೂನ್ನಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.