ಭಾರತ, ಮೇ 6 -- ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಹಲವರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅತಿಯಾದ ವಾಯುಮಾಲಿನ್ಯ, ಧೂಳು ಅಸ್ತಮಾ ಹೆಚ್ಚಲು ಪ್ರಮುಖ ಕಾರಣವಾಗಿದೆ. ಅಸ್ತಮಾ ಎನ್ನುವುದು ದೀರ್ಘಕಾಲ ಕಾಡುವ ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಯಾಗಿದೆ. ಅಸ್ತಮಾ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಮೇ 6 ರಂದು ವಿಶ್ವ ಅಸ್ತಮಾ ದಿನವನ್ನು ಆಚರಿಸಲಾಗುತ್ತದೆ.

ಅಸ್ತಮಾವು ಅನುವಂಶೀಯ ಕಾರಣದಿಂದ ಹಾಗೂ ಅಲರ್ಜಿ, ವಾಯುಮಾಲಿನ್ಯ ಹಾಗೂ ಉಸಿರಾಟದ ಸೋಂಕು ಮುಂತಾದ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಧೂಳು, ಪರಾಗ ಅಥವಾ ಒತ್ತಡದಿಂದಾಗಿ ಆಸ್ತಮಾ ಪ್ರಚೋದಿಸಲ್ಪಟ್ಟಾಗ ಉಸಿರಿನ ನಾಳಗಳು ಸಂಕುಚಿತವಾಗುತ್ತವೆ. ಇದು ಉಬ್ಬಸ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಎದೆ ಬಿಗಿತದಂತಹ ಲಕ್ಷಣಗಳಿಗೆ ಕಾರಣವಾಗುತ್ತದೆ. ಇದಕ್ಕೆ ಚಿಕಿತ್ಸೆ ನೀಡದೇ ಬಿಟ್ಟರೆ ಇದು ನಮ್ಮ ದೈನಂದಿನ ಜೀವನ ಹಾಗೂ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.

ವಿಶ್ವ ಅಸ್ತಮಾ ದಿನವಾದ ಇಂದು (ಮೇ 6) ಅಸ್ತಮಾದ 6 ವಿಧಗಳು ಯಾವುವು, ಅವುಗಳ ಗುಣ...