Bangalore, ಮಾರ್ಚ್ 30 -- ಹೀಗೆ ಸುಮ್ಮನೆ. ಸರಳ ಅರ್ಥಶಾಸ್ತ್ರ.. ಮೊನ್ನೆ ನಮ್ ಮನೆಗೆ ನೆಂಟ್ರು ಬಂದಿದ್ರು. ಬೆಳ್ಳಂಬೆಳಗ್ಗೆ ಬಸ್ ಸ್ಟಾಂಡಿಗೆ ಹೋಗಿ ಕರ್ಕೊಂಡು ಬಂದು ಒಮ್ಮೆ ಹೀಗೆ ದಿಟ್ಟಿಸಿ ನೋಡಿದೆ.. ದೇಶದಲ್ಲಿ ಬಹಳ ದೊಡ್ಡ ಕ್ರಾಂತಿ ಆಗ್ತಿದೆ. ಅರಿವಿಗೆ ಬಂದಿದಾ ಅಂತಾ ಕೇಳಿದೆ.. ಏನದು..? ಅಂತಾ ಕೇಳಿದ್ಳು. ಜೀನ್ಸ್ ಪ್ಯಾಂಟುಗಳೆಲ್ಲ ಟೈಟ್ ಹೋಗಿ ಮತ್ತೆ ಹಳೆಯ ತರ ದೊಗಲೆ ಬರೋಕೆ ಶುರು ಆಗಿದೆ. ಇಷ್ಟು ಜನರಿಗೆ ಹೊಸ ಜೀನ್ಸ್ ತಯಾರಿಗೆ ಎಷ್ಟು ಕೆಲಸ. ಹಳತನ್ನು ಏನು ಮಾಡೋದು. ನೀನೂ ಬೇಗ ಶಿಫ್ಟ್ ಆಗೋದು ಒಳ್ಳೇದು. ಅದಕ್ಕೆ. ಅದು ನಾನ್ ಸೆನ್ಸ್. ನನಗೂ ಗೊತ್ತಿದೆ. ಹಾಗಂತ ಹಳೇ ಪ್ಯಾಂಟ್ ಬಿಸಾಡೋದು ಬೇಡಾ ಅಂತಾ ನೈಟ್ ಬಸ್ಸಲ್ಲಿ ಹೋಗುವಾಗ, ತರಕಾರಿ ತರುವಾಗೆಲ್ಲ ಹಳತನ್ನು ಹಾಕಿ ಮುಗಿಸಲು ಬರುತ್ತೆ. ಅಂದ್ಳು.

ಯಾಕೆ ಹೀಗೆ.. ಮೊದಲಾದ್ರೆ ಫ್ಯಾಶನ್ ಬದಲಿದ್ರೆ ಮತ್ತೆ ಹಳತನ್ನು ಯೂಸ್ ಮಾಡೋರು ಯಾರೂ ಇಲ್ಲ. ಈವಾಗ ಹೆಂಗಸರೂ ಅದಕ್ಕೆಲ್ಲ ಬಹಳ ಕ್ಯಾರೇ ಅಂತಿಲ್ಲ.. ಯಾಕೆ..?

ಕಾರಣ.. ಈವಾಗ ಮಿಡಲ್ ಇನ್ಕಂ ಗ್ರೂಪಿನ ಕಥೆ ಹೇಳ್ಬೇಕ...