ಭಾರತ, ಮಾರ್ಚ್ 19 -- ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಸಾಲುಸಾಲು ಹಬ್ಬಗಳು ಬರುತ್ತವೆ. ಆಷಾಢ ಮಾಸದಲ್ಲಿ ಹೆಚ್ಚು ಶುಭ ಕಾರ್ಯಗಳು ನಡೆಯುವುದಿಲ್ಲವಾದರೂ, ಗುರುಪೂರ್ಣಿಮೆ ಸೇರಿದಂತೆ ಹಲವು ಮುಖ್ಯ ಹಬ್ಬಗಳು ಇವೆ. ಶ್ರೀವಿಶ್ವಾವಸುನಾಮ ಸಂವತ್ಸರದಲ್ಲಿ ಆಷಾಢ, ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಬರುವ ಪ್ರಮುಖ ಹಬ್ಬಗಳ ವಿವರ ಇಂತಿದೆ.

ಶ್ರೀ ಮಹಾಲಕ್ಷ್ಮಿ ಪೂಜೆ: ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರಗಳಂದು ಶ್ರೀ ಮಹಾಲಕ್ಷ್ಮೀಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗುತ್ತದೆ. ಈ ದಿನಗಳನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಗುರುಪೂರ್ಣಿಮ (10-7-2025, ಗುರುವಾರ): ಸಕಲ ವೇದಗಳ ಸಂಕಲನಕಾರ ಮತ್ತು ಮಹಾಭಾರತವನ್ನು ರಚಿಸಿದ ವ್ಯಾಸರಾಯರ ಜನ್ಮದಿನವನ್ನು ಗುರುಪೂರ್ಣಿಮಾದ ಹೆಸರಿನಲ್ಲಿ ಆಚರಿಸುತ್ತೇವೆ.

ದಕ್ಷಿಣಾಯಣ ಪುಣ್ಯಕಾಲ (16-7-2025, ಬುಧವಾರ): ಕಟಕ ಸಂಕ್ರಮಣವನ್ನು ದಕ್ಷಿಣಾಯಣ ಪುಣ್ಯಕಾಲ ಎಂದು ಕರೆಯುತ್ತೇವೆ. ಈ ದಿನದಂದು ಪುಣ್ಯಸ್ನಾನ ಮಾಡುವುದು ವಾಡಿಕೆ. ಅಸುನೀಗಿದ ವಂಶದ ಹಿರಿಯರಿಗೆ ತರ್ಪಣ ನೀಡುವುದು ಸಂಪ್ರದಾಯ. ಈ...