ಭಾರತ, ಮಾರ್ಚ್ 19 -- ಶ್ರೀವಿಶ್ವಾವಸುನಾಮ ಸಂವತ್ಸರದ ಮುಖ್ಯ ಹಬ್ಬಗಳು: ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಮಾಸಗಳಲ್ಲಿ ಹಲವು ಮುಖ್ಯ ಹಬ್ಬಗಳು ಇವೆ. ನವರಾತ್ರಿಯಲ್ಲಿ ಮೈಸೂರು ದಸರಾ ಆಚರಣೆ ಇದೆ. ದೀಪಾವಳಿ, ಶಿವರಾತ್ರಿ ಸೇರಿದಂತೆ ಕರ್ನಾಟಕದ ವಿವಿಧೆಡೆ ಸಡಗರದಿಂದ ಆಚರಿಸುವ ಹಲವು ಪ್ರಮುಖ ಹಬ್ಬಗಳನ್ನು ಈ ಮಾಸಗಳಲ್ಲಿ ಆಚರಿಸಲಾಗುತ್ತದೆ.

ಶ್ರೀ ಸರಸ್ವತಿ ಪೂಜೆ (29-9-2025. ಸೋಮವಾರ): ವಿದ್ಯಾದೇವತೆಯಾದ ಶ್ರೀ ಸರಸ್ವತಿಯನ್ನು ಇಂದು ಪೂಜಿಸಲಾಗುತ್ತದೆ. ಇದರಿಂದ ವಿದ್ಯಾಭ್ಯಾಸದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತವೆ.

ದುರ್ಗಾಷ್ಟಮಿ (30-9-2025, ಮಂಗಳವಾರ): ದುರ್ಗೆಯು ಶಕ್ತಿದೇವತೆ. ಪರಬ್ರಹ್ಮರೂಪಿಣಿಯಾದ ಆದಿಪರಾಶಕ್ತಿ ಸತ್ಯ ಧರ್ಮ ಉಳಿಸುವ ಸಲುವಾಗಿ ಅವತಾರ ತಾಳುತ್ತಾಳೆ. ಮಹಿಷನನ್ನು ವಧಿಸಿ ಶಾಂತಿ ನೆಮ್ಮದಿ ನೆಲೆಸಲು ಕಾರಣಳಾಗುತ್ತಾಳೆ. ಆದ್ದರಿಂದ ನವರಾತ್ರಿಯಲ್ಲಿ ಮಾತ್ರವಲ್ಲದೆ ಜೀವನದ ಪ್ರತಿಯೊಂದು ಹಾದಿಯಲ್ಲಿಯೂ ದುರ್ಗಾಪೂಜೆಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಇದನ್ನೂ ಓದಿ: ಭಾ...