ಭಾರತ, ಏಪ್ರಿಲ್ 18 -- ಹಂಪಿ ಎಂದ ತಕ್ಷಣ ನೆನಪಿಗೆ ಬರೋದು ಕಲ್ಲಿನ ಕಲಾಕೃತಿಗಳು. ಅದೂ ದೇಗುಲ, ಕಟ್ಟಡಗಳು. ವಿಶ್ವ ಪಾರಂಪರಿಕ ಮಾನ್ಯತೆ ಪಡೆದಿರುವ ಪಟ್ಟಿಯಲ್ಲಿರುವ ತಾಣ ಹಂಪಿಯನ್ನು ನೋಡುವುದೇ ಚಂದ.
ಹಂಪಿಗೆ ಸಂಬಂಧಿಸಿ ಅತ್ಯಂತ ಹಳೆಯ ದಾಖಲೆಗಳು ನಮ್ಮನ್ನು ಒಂದನೇ ಶತಮಾನಕ್ಕೆ ಕರೆದೊಯ್ಯುತ್ತವೆ. ಇದಕ್ಕಿಂತಲ್ಲೂ ಹಿಂದೆ, ಕ್ರಿಸ್ತ ಪೂರ್ವ ಯುಗದಲ್ಲಿ, ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲಿ ಇದು ಅಶೋಕ ಚಕ್ರವರ್ತಿಯ ರಾಜ್ಯಪಾಲರ ಅಡಿಯಲ್ಲಿದ್ದ ನಗರ ಎಂಬ ಬಗ್ಗೆ ದಾಖಲೆಗಳಿವೆ.
ಹಂಪಿಯ ದೇಗುಲಗಳು, ಕಟ್ಟಡಗಳು, ಕಲಾಕೃತಿಗಳ ಸಮೂಹವನ್ನು ವೀಕ್ಷಿಸುತ್ತಾ ಹೋದಂತೆ ಇತಿಹಾಸದ ಹಾದಿಯಲ್ಲಿ ಹೆಜ್ಜೆ ಹಾಕಿದ ಅನುಭವ ನಮಗೆ ಆಗುತ್ತದೆ. ಅಂತಹ ಕಟ್ಟಡಗಳನ್ನು ಮಳೆ ಬಂದ ನೋಟದಲ್ಲಿ ನೋಡುವುದು ಇನ್ನೂ ಚೆಂದ.
ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ಎನ್ನುವ ದೊಡ್ಡರಂಗೇಗೌಡರ ಸಾಲುಗಳು ಹಾಡಿನ ರೂಪ ಪಡೆದು ಜನ ಮಾನಸದಲ್ಲಿ ನೆಲೆಗೊಂಡಿದೆ. ಅಂತಹ ಸಾಲುಗಳಿಗೆ ಜೀವ ತುಂಬುವ ನೋಟವಿದು.
ಹಂಪಿಯು ಭಾರತದ ಅತ್ಯಂತ ಪ್ರಸಿದ್ಧ ಪುರಾತತ್ವ ಕೇಂದ್ರಗಳಲ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.