ಭಾರತ, ಏಪ್ರಿಲ್ 28 -- ದೂರದ ಪ್ರದೇಶಗಳಿಗೆ ಬೇಗನೆ ತಲುಪಲು ವಿಮಾನ ಪ್ರಯಾಣ ಅತ್ಯವಶ್ಯಕ. ಹೀಗಾಗಿ ವಿಮಾನ ನಿಲ್ದಾಣಗಳು ಜಾಗತಿಕ ಸಂಪರ್ಕಕ್ಕೆ ಅತ್ಯಗತ್ಯ. ವಿವಿಧ ದೇಶಗಳು ಹಾಗೂ ನಗರಗಳ ನಡುವೆ ಪ್ರಯಾಣವನ್ನು ಸುಗಮಗೊಳಿಸಲು ವಿಮಾನ ನಿಲ್ದಾಣಗಳು ಬೇಕು. ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರಿಗಾಗಿ ವಿಶ್ವ ದರ್ಜೆಯ ಸೌಲಭ್ಯಗಳನ್ನು ನೀಡಲಾಗುತ್ತದೆ. 2025ರಲ್ಲಿ ವಿಶ್ವದ ಟಾಪ್ 10 ವಿಮಾನ ನಿಲ್ದಾಣಗಳು ಯಾವುದು ಎಂಬುದಾಗಿ ಈ ಸುದ್ದಿಯಲ್ಲಿ ಕೊಡಲಾಗಿದೆ. ಸ್ಕೈಟ್ರಾಕ್ಸ್ ವಿಮಾನ ನಿಲ್ದಾಣ ಶ್ರೇಯಾಂಕದ ಪ್ರಕಾರ ಈ ಪಟ್ಟಿ ಸಿದ್ಧವಾಗಿದ್ದು, ಅಗ್ರ 10ರೊಳಗೆ ಭಾರತದ ಯಾವುದೇ ವಿಮಾನ ನಿಲ್ದಾಣಗಳು ಸ್ಥಾನ ಪಡೆದಿಲ್ಲ.

ಭಾರತದಲ್ಲಿ ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. ಅವುಗಳಲ್ಲಿ ದೆಹಲಿ, ಬೆಂಗಳೂರು, ಮುಂಬೈ ವಿಮಾನ ನಿಲ್ದಾಣಗಳು ಹೆಚ್ಚು ಜನನಿಬಿಡ, ಸದಾ ಕಾರ್ಯನಿರತ ಏರ್‌ಪೋರ್ಟ್‌ಗಳಾಗಿವೆ. ಹಾಗಿದ್ದರೆ ವಿಶ್ವದ ಯಾವ ವಿಮಾನ ನಿಲ್ದಾಣವು ಅತ್ಯುತ್ತಮ ವಿಮಾನ ನಿಲ್ದಾಣ ಎಂದು ನೋಡೋಣ.

ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣವು 2025ರಲ್...