ಭಾರತ, ಮಾರ್ಚ್ 9 -- ದುಬೈ: ಭಾರತದಲ್ಲಿ ನಡೆದ 2023ರ ಏಕದಿನ ವಿಶ್ವಕಪ್‌ ವೇಳೆ ನ್ಯೂಜಿಲೆಂಡ್‌ ತಂಡದ ಯುವ ಆಟಗಾರ ರಚಿನ್‌ ರವೀಂದ್ರ ಅಬ್ಬರಿಸಿದ್ದರು. ಆಡಿದ 10 ಪಂದ್ಯಗಳಲ್ಲಿ 3 ಶತಕ ಸಹಿತ 578 ರನ್‌ ಸಿಡಿಸಿದ್ದರು. ಇದೀಗ ಐಸಿಸಿ ಚಾಂಪಿಯನ್ಸ್‌ ಟ್ರೋಫಿ 2025ರಲ್ಲೂ ಕಿವೀಸ್‌ ಪರ ರಚಿನ್‌ ಅಬ್ಬರಿಸಿದ್ದಾರೆ. ಅಲ್ಲದೆ ದಾಖಲೆ ನಿರ್ಮಿಸಿದ್ದಾರೆ. ದುಬೈನಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಣಸುತ್ತಿವೆ. ಪಂದ್ಯದಲ್ಲಿಯೂ ಕಿವೀಸ್ ಆಟಗಾರ ರಚಿನ್ 37 ರನ್‌ ಗಳಿಸಿದರು. ಉತ್ತಮ ಆರಂಭ ಪಡೆದ ಅವರು, ಕುಲ್ದೀಪ್ ಯಾದವ್ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಕ್ರೀಸ್‌ನಲ್ಲಿ ಸ್ವಲ್ಪ ಸಮಯ ಇದ್ದರೂ, ರವೀಂದ್ರ ಬೃಹತ್‌ ದಾಖಲೆಯನ್ನು ಮುರಿದಿದ್ದಾರೆ.

ಉತ್ತಮ ಫಾರ್ಮ್‌ನಲ್ಲಿರುವ ರಚಿನ್‌, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 4 ಪಂದ್ಯಗಳಿಂದ 263 ರನ್ ಗಳಿಸಿದ್ದಾರೆ. ಸದ್ಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ ಇವರು. ಈ ದಾಖಲೆಯನ್ನ...