ಭಾರತ, ಮೇ 21 -- ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಾನು ಮುಷ್ತಾಕ್ ಅವರ ಸಣ್ಣ ಕಥೆಗಳ ಅನುವಾದಿತ ಕೃತಿ ಹಾರ್ಟ್ ಲ್ಯಾಂಪ್ ಗೆ ಈ ಪ್ರಶಸ್ತಿ ಸಂದಿದೆ. ದೀಪಾ ಭಸ್ತಿ ಅವರು ಇದನ್ನು ಕನ್ನಡದಿಂದ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ. ಲಂಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಹಿತಿ ಬಾನು ಮುಷ್ತಾಕ್ ಅವರು ಪ್ರಶಸ್ತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ದೀಪಾ ಭಸ್ತಿ ಅವರು ಜೊತೆಗಿದ್ದರು. ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಕೃತಿ ಎಂಬ ಹೆಗ್ಗಳಿಕೆಗೂ ಹಾರ್ಟ್ ಲ್ಯಾಂಪ್ ಕೃತಿ ಪಾತ್ರವಾಗಿದೆ. ಪ್ರಶಸ್ತಿಯ ಜೊತೆಗೆ 50 ಸಾವಿರ ಪೌಂಡ್ (ಸುಮಾರು 57.28 ಲಕ್ಷ ರೂಪಾಯಿ) ನಗದು ನೀಡಲಾಗಿದೆ. ವಿಶ್ವದ ಅತ್ಯಂತ ಅಪೇಕ್ಷಿತ ಸಾಹಿತ್ಯ ಪ್ರಶಸ್ತಿಗಳಲ್ಲಿ ಬೂಕರ್ ಪ್ರಶಸ್ತಿ ಕೂಡ ಒಂದು. ಇದರ ಇತಿಹಾಸ ಮತ್ತು ಮತ್ತು ಮಹತ್ವವನ್ನು ತಿಳಿಯೋಣ.

ಇಂಗ್ಲಿಷ್ ಸಾಹಿತ್ಯದಲ್ಲಿನ ಅತ್ಯುತ್ತಮ ಬರಹಗಳಿಗೆ ಬೂಕರ್ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದರಲ್ಲಿ ಕಾಂದರ...