ಭಾರತ, ಮಾರ್ಚ್ 17 -- ವಯಸ್ಸು ಕೇವಲ ಸಂಖ್ಯೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕ್ರಿಕೆಟಿಗ ಅಬ್ಬಬ್ಬಾ ಅಂದರೂ 40 ವರ್ಷದ ತನಕ ಆಡುವುದೇ ಹೆಚ್ಚು. ಏಕೆಂದರೆ ಆಟಕ್ಕೆ ದೇಹ ಸ್ಪಂದಿಸಲ್ಲ ಮತ್ತು ಪ್ರದರ್ಶನದ ಮೇಲೂ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ. ಕೆಲವೊಂದಿಷ್ಟು ಮಂದಿ 50 ವರ್ಷದ ತನಕ ಆಡಿದ್ದೂ ಇದೆ. ಆದರೆ, ಇಲ್ಲೊಬ್ಬ ಕ್ರಿಕೆಟಿಗ ತನ್ನ 62ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ (International Cricket) ಪದಾರ್ಪಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾನೆ! ಇದು ವಿಶ್ವದಾಖಲೆಯೂ ಹೌದು.

ಮ್ಯಾಥ್ಯೂ ಬ್ರೌನ್ಲೀ (Matthew Brownlee) ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಸ್ಡನ್ ಪ್ರಕಾರ, ಮ್ಯಾಥ್ಯೂ ಬ್ರೌನ್ಲೀ 2025ರ ಮಾರ್ಚ್ 10 ರಂದು ಗುವಾಕ್ಸಿಮಾದಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ (ಟಿ20ಐ) ಪಂದ್ಯದಲ್ಲಿ ಕೋಸ್ಟರಿಕಾ ವಿರುದ್ಧ ಫಾಕ್ಲ್ಯಾಂಡ್ ದ್ವೀಪದ ಪರ ಪದಾರ್ಪಣೆ ಮಾಡಿದ್ದಾರೆ. 62 ವರ್ಷ ವಯಸ್ಸಿನ ಬ್ರೌನ್ಲೀ ಪುರುಷರ ಅಂ...