ಭಾರತ, ಫೆಬ್ರವರಿ 9 -- ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಡಾಲಿ ಧನಂಜಯ, ತಮ್ಮ ವಿವಾಹದ ಲಗ್ನಪತ್ರಿಕೆಯನ್ನು ಕೈ ಬರಹದಲ್ಲೇ ಬರೆದು ನೀಡುವ ಮೂಲಕ ಎಲ್ಲರನ್ನ ಆತ್ಮೀಯವಾಗಿ ಆಮಂತ್ರಿಸಿದ್ದರು. ಸ್ಯಾಂಡಲ್‌ವುಡ್‌ ಸ್ಟಾರ್‍‌ಗಳಿಗೆ ಆಮಂತ್ರಣ ನೀಡಿದ್ದರು. ಆದರೆ ಈಗ ಅಭಿಮಾನಿಗಳಿಗೆ ವಿಶೇಷ ಆಮಂತ್ರಣ ನೀಡಿದ್ದಾರೆ. ವಿಶೇಷ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳನ್ನೂ ತಮ್ಮ ಮದುವೆಗೆ ಆಮಂತ್ರಿಸಿದ್ದಾರೆ. ಮಿಸ್ ಮಾಡ್ದೆ ಎಲ್ಲರೂ ಬಂದು ಆಶೀರ್ವಾದ ಮಾಡಿ, ಹೋಳಿಗೆ ಊಟ ಮಾಡಿಕೊಂಡು ಹೋಗಿ ಅಭಿಮಾನಿಗಳಿಗೆ ಒಂದು ಸ್ಪೆಷಲ್ ಆಮಂತ್ರಣ ಎಂದು ಬರೆದು, ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಗೆ "ವಿದ್ಯಾಪತಿ" ದ್ವಾರದ ಮೂಲಕ ಪ್ರವೇಶ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ್ ಬ್ಯಾಚುಲರ್ ಆಗಿದ್ದಾಗ ಅವರ ಜೀವನ ಬೇರೆಯದೇ ರೀತಿ ಇತ್ತು, ಅವರ ಗೆಳೆಯರು ಮದುವೆ ವಿಷಯ ಬಂದಾಗ ಯಾವ ರೀತಿ ಮಾತಾಡ್ತಾ ಇದ್ರು? ಇನ್ನು ನೆಂಟರಿಷ್ಟರು ಮದುವೆ ವಿಚಾರವನ್ನು ಹೇಗೆಲ್ಲಾ ಕೇಳ್ತಾ ಇದ್ರು?, ಅವರ ಅಪ್ಪ, ಅಮ್ಮ ಮೊಮ್ಮಗುವನ್ನು ಯಾವಾಗ ಕ...