ಭಾರತ, ಮೇ 14 -- ಒಂದು ನಿರ್ದಿಷ್ಠ ಬಜೆಟ್‌ನಲ್ಲಿ ಎಲ್ಲಾ ಫೀಚರ್‌ಗಳಿರುವ ಸ್ಮಾರ್ಟ್ ಫೋನ್ ಖರೀದಿಸುವುದು ಅಷ್ಟು ಸುಲಭದ ಕೆಲಸವಲ್ಲ. ಮಧ್ಯಮ ಶ್ರೇಣಿಯಲ್ಲಿ ಫೋನ್‌ ಖರೀದಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಆಯ್ಕೆಗಳಿದ್ದರೂ, ಸೂಕ್ತ ಫೋನ್‌ ಆಯ್ಕೆ ಮಾಡುವ ಕೆಲಸ ಕಷ್ಟಕರ. ನೀವೇನಾದರು 40,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಹುಡುಕುತ್ತಿದ್ದರೆ, ನಾವು ನಿಮಗೆ ಅಗತ್ಯ ಸಲಹೆ ನೀಡುತ್ತೇವೆ. ಇದರಲ್ಲಿ ವಿವೋ ವಿ50, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ56 ನಂತಹ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಕಳೆದ ವರ್ಷದ ಕೆಲವು ಜನಪ್ರಿಯ ಮಾಡೆಲ್‌ಗಳಾದ ಗೂಗಲ್ ಪಿಕ್ಸೆಲ್ 8ಎ ಮತ್ತು ಶಿಯೋಮಿ 14 ಸಿವಿ ಕೂಡಾ ಇವೆ.

ಫೋನ್‌ನ ಕಾರ್ಯಕ್ಷಮತೆ, ಕ್ಯಾಮೆರಾ ಸೇರಿದಂತೆ ವಿವಿಧ ಅಗತ್ಯ ಫೀಚರ್‌ಗಳೊಂದಿಗೆ ಬಳಕೆದಾರರ ಅಗತ್ಯಗಳನ್ನು ಪೂರೈಸುವ 5 ವೈಶಿಷ್ಟ್ಯಗಳಿರುವ ಫೋನ್‌ಗಳ ಪಟ್ಟಿ ಇಲ್ಲಿದೆ.

ವಿವೋ ವಿ50: ಫೆಬ್ರುವರಿಯಲ್ಲಿ ಬಿಡುಗಡೆಯಾದ ಫೋನ್‌, ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಗಮನ ಸೆಳೆಯಿತು. ಡ್ಯುಯಲ್ 50 ಎಂಪಿ ಕ್ಯಾಮೆರಾ ಸೆ...