ಭಾರತ, ಜೂನ್ 13 -- ಅರ್ಥ: ವಿವೇಚನೆಯುಳ್ಳ ಮನುಷ್ಯನು ಬೇರೆ ಬೇರೆ ಐಹಿಕ ದೇಹಗಳ ಕಾರಣದಿಂದ ಬೇರೆ ಬೇರೆ ಅಸ್ತಿತ್ವಗಳನ್ನು ನೋಡುವುದನ್ನು ಬಿಟ್ಟಾಗ ಮತ್ತು ಎಲ್ಲೆಲ್ಲೂ ಜೀವಿಗಳು ಹೇಗೆ ವಿಸ್ತಾರ ಹೊಂದುತ್ತಾರೆ ಎನ್ನುವುದನ್ನು ಕಂಡಾಗ ಅವನು ಬ್ರಹ್ಮನ್ ಪರಿಕಲ್ಪನೆಯನ್ನು ತಲಪುತ್ತಾನೆ.

ಭಾವಾರ್ಥ: ಜೀವಿಗಳ ಬೇರೆ ಬೇರೆ ದೇಹಗಳು ಜೀವಾತ್ಮನ ಬೇರೆ ಬೇರೆ ಬಯಕೆಗಳ ಕಾರಣದಿಂದ ಆದವು; ದೇಹಗಳು ಆತ್ಮಕ್ಕೆ ಸೇರಿದವಲ್ಲ. ಇದನ್ನು ಮನುಷ್ಯನು ನೋಡಲು ಸಾಧ್ಯವಾದಾಗ ಅವನು ನಿಜವಾಗಿ ನೋಡುತ್ತಾನೆ. ಬದುಕಿನ ಐಹಿಕ ಪರಿಕಲ್ಪನೆಯಲ್ಲಿ ಒಬ್ಬನು ದೇವತೆಯಾಗಿ, ಮತ್ತೊಬ್ಬನು ಮನುಷ್ಯನಾಗಿ, ನಾಯಿ, ಬೆಕ್ಕು ಇತ್ಯಾದಿಯಾಗಿ ನಮಗೆ ಕಾಣುತ್ತಾರೆ. ಇದು ಐಹಿಕ ದೃಷ್ಟಿ; ವಾಸ್ತವ ದೃಷ್ಟಿಯಲ್ಲ. ಈ ಐಹಿಕ ಭಿನ್ನತೆಗೆ ಬದುಕಿನ ಐಹಿಕ ಪರಿಕಲ್ಪನೆಯೇ ಕಾರಣ. ಐಹಿಕ ದೇಹವು ನಾಶವಾದ ಅನಂತರ ಜೀವಾತ್ಮ ಒಂದೇ. ಐಹಿಕ ಪ್ರಕೃತಿಯ ಸಂಪರ್ಕದಿಂದ ಜೀವಾತ್ಮನಿಗೆ ಬೇರೆ ಬೇರೆ ದೇಹಗಳು ಬರುತ್ತವೆ. ಮನುಷ್ಯನಿಗೆ ಇದನ್ನು ಕಾಣಲು ಸಾಧ್ಯವಾದಾಗ ಅವನು ದಿವ್ಯದರ್ಶನವನ್ನು ಪಡೆಯುತ್ತ...