ಭಾರತ, ಮೇ 17 -- ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿ ಇದ್ದು, ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಕರ್ಮ ಫಲಗಳನ್ನು ನೀಡುತ್ತಾರೆ. ನಾಳೆ ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ? ಎಂಬುದನ್ನು ನೋಡೋಣ. ಮೇ 18ರ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ

ಮೇಷ ರಾಶಿ: ತಾಳ್ಮೆ ಯಶಸ್ಸಿಗೆ ಕಾರಣವಾಗುತ್ತದೆ. ಸ್ಥಿರವಾದ ಆಲೋಚನೆಗಳು ಇರುವುದಿಲ್ಲ. ಛಲ ಬಿಡದೇ ಪ್ರಯತ್ನ ಮುಂದುವರಿಸುತ್ತೀರಿ. ವ್ಯವಹಾರದಲ್ಲಿ ಜಾಗರೂಕರಾಗಿರಿ. ದುಡುಕಿನ ನಿರ್ಧಾರವು ನಷ್ಟಕ್ಕೆ ಕಾರಣವಾಗಬಹುದು. ವಿವಾದಾತ್ಮಕ ವಿಷಯಗಳಲ್ಲಿ ಭಾಗಿಯಾಗದಿರಿ.

ವೃಷಭ ರಾಶಿ: ಯಾವುದೇ ಕಷ್ಟ ಎದುರಾದರೂ ಎದೆಗುಂದದಿರಿ. ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಗೆಲುವು ಸಾಧ್ಯ. ಸಣ್ಣ ಸಣ್ಣ ವಿಷಯಗಳಿಗೂ ಕಿರಿಕಿರಿ ಎದುರಿಸಲಿದ್ದೀರಿ. ಪ್ರೀತಿಪಾತ್ರರ ಸಹಾಯದಿಂದ ಸಮಸ್ಯೆ ಬಗೆಹರಿಯುತ್ತದೆ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

ಮಿಥುನ ರಾಶಿ: ಅತಿಯಾದ ಕೆಲಸ ಕಾರ್ಯಗಳ ಕಾರಣದಿಂದ ವಿಶ್ರಾಂತಿ ಸಿಗುವುದಿಲ್ಲ. ಪ್ರಲೋಭನೆಗೆ ಬಲಿಯಾಗದಿರಿ. ಚೆನ್ನಾಗಿ ಯೋಚಿಸಿ ನಿರ...