ಭಾರತ, ಫೆಬ್ರವರಿ 15 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಫೆಬ್ರವರಿ 16ರ ಭಾನುವಾರದಿಂದ 22ರ ಶನಿವಾರದವರೆಗಿನ ವಾರ ಭವಿಷ್ಯವನ್ನು ಇಲ್ಲಿ ನೀಡಲಾಗಿದೆ.

ಅತಿಯಾದ ಭೋಜನದಿಂದ ಅಜೀರ್ಣ ತೊಂದರೆ ಉಂಟಾಗುತ್ತದೆ. ಯಾವುದೇ ವಿಚಾರವಾದರೂ ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸುಖ ದುಃಖವನ್ನು ಸಮಾನ ಮನಸ್ಸಿನಿಂದ ತೆಗೆದುಕೊಳ್ಳುವಿರಿ. ಆತುರಕ್ಕೆ ಒಳಗಾಗದೆ ಕ್ರಮೇಣ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಸೋದರಿಯಿಂದ ಉತ್ತಮ ಆದಾಯ ದೊರೆಯುತ್ತದೆ. ಮನದಲ್ಲಿ ಅನಾವಶ್ಯಕವಾದ ಯೋಚನೆ ಇರುತ್ತದೆ. ಮಧ್ಯಮ ಗತಿಯ ಆದಾಯ ನಿಮಗಿರುತ್ತದೆ. ಯೋಚನೆ ಮಾಡದೆ ದುಡುಕನಿಂದ ಮಾತನಾಡುವಿರಿ. ...