Bengaluru, ಮೇ 13 -- ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮದ ಬಳಿಕ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮೇ 17ರಿಂದ ಮತ್ತೆ ಆರಂಭವಾಗಲಿದೆ. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ. ಈ ಬೆನ್ನಲ್ಲೇ ಭಾರತೀಯ ಆಟಗಾರರು, ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಆದರೆ ಈ ಪ್ರತಿಷ್ಠಿತ ಪ್ರವಾಸಕ್ಕೆ ಇಬ್ಬರು ಘಟಾನುಘಟಿ ಆಟಗಾರರೇ ಇರುವುದಿಲ್ಲ. ಹೌದು, ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮಾ ಅವರಿಲ್ಲದೆ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಸೆಣಸಾಟ ನಡೆಸಲಿದೆ.

ಮೇ 7ರಂದು ಹಿಟ್​​ಮ್ಯಾನ್ ಖ್ಯಾತಿಯ ರೋಹಿತ್​ ಶರ್ಮಾ, ಮೇ 12 ರಂದು ಚೇಸಿಂಗ್ ಮಾಸ್ಟರ್​ ವಿರಾಟ್ ಕೊಹ್ಲಿ ಅವರು ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತರಾಗಿದ್ದಾರೆ. ಇದೀಗ ಇವರ ಸ್ಥಾನ ಯಾರು ತುಂಬುತ್ತಾರೆ ಎಂಬುವುದೇ ದೊಡ್ಡ ಸವಾಲು. ಈ ಆಧುನಿಕ ದಿಗ್ಗಜರಿಂದ ತೆರವಾದ ಸ್ಥಾನಗಳಿಗೆ ಬಿಸಿಸಿಐ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಸಹ ದೊಡ್ಡ ಕುತೂಹಲವೂ ಆಗಿದೆ. ಹಾಗಿದ್ದರೆ ಇಂಗ್ಲೆಂಡ್ ಸರಣಿಗೆ ಭಾರತದ ಸಂಭಾವ್ಯ ತಂಡ ಹೇಗಿರಲಿದೆ? ಇಲ್ಲಿದೆ ವಿವರ.

ಯಶಸ್ವ...