ಭಾರತ, ಫೆಬ್ರವರಿ 23 -- ಟೀಮ್ ಇಂಡಿಯಾ ಸೂಪರ್​ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 51ನೇ ಏಕದಿನ ಶತಕ ಸಿಡಿಸಿ ಹಲವು ವಿಶ್ವದಾಖಲೆಗಳನ್ನು ಮುರಿದಿದ್ದಾರೆ. ಫೆ 23ರಂದು ಪಾಕಿಸ್ತಾನ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ತಾನು 35 ರನ್ ಗಳಿಸಿದ್ದಾಗ ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 14,000 ರನ್ ಪೂರೈಸಿ ವಿಶ್ವದಾಖಲೆ ನಿರ್ಮಿಸಿದ ಕೊಹ್ಲಿ, ಐತಿಹಾಸಿಕ ಶತಕ ಸಿಡಿಸಿ ತನ್ನ ದಾಖಲೆಯ ಪುಸ್ತಕಕ್ಕೆ ಮತ್ತೊಂದಿಷ್ಟು ದಾಖಲೆಗಳನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 100 ರನ್ ಸಿಡಿಸಿ ಪಾಕ್ ಅನ್ನು ಮಣಿಸುವಲ್ಲೂ ಪ್ರಮುಖ ಪಾತ್ರವಹಿಸಿದರು. ಸುಮಾರು 15 ತಿಂಗಳ ನಂತರ ಶತಕ ಸಿಡಿಸಿ ಹಲವು ದಾಖಲೆ ನಿರ್ಮಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಸಿಡಿಸಿದ ಅವಿಸ್ಮರಣೀಯ ಶತಕವು ಕೊಹ್ಲಿ ಪಾಲಿಗೆ 51ನೇ ಏಕದಿನ ಶತಕ. 2023ರ ಏಕದಿನ ವಿಶ್ವಕಪ್ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 50ನೇ ಒಡಿಐ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದ ಕಿಂಗ್​, ಆ ಬಳಿಕ ಇದೇ ಮೊದಲ ಬಾರಿಗ...