ಭಾರತ, ಫೆಬ್ರವರಿ 23 -- ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ದಾಖಲೆಯಾಟ ಮುಂದುವರೆದಿದೆ. ಪಾಕಿಸ್ತಾನ ವಿರುದ್ಧ ಸದಾ ಅಬ್ಬರಿಸುವ ಅವರು, ಇದೀಗ ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧದ ಪಂದ್ಯದಲ್ಲೇ ಮತ್ತೊಂದು ವಿಶೇಷ ಮೈಲಿಗಲ್ಲು ಸಾಧಿಸಿದ್ದಾರೆ. ಚಾಂಪಿಯನ್ಸ್‌ ಟ್ರೋಫಿ ಪಂದ್ಯದಲ್ಲಿ ಪಾಕ್‌ ವಿರುದ್ಧ 14 ರನ್‌ ಕಲೆ ಹಾಕುವ ಮೂಲಕ ಏಕದಿನ ಸ್ವರೂಪದಲ್ಲಿ ಒಟ್ಟು 14000 ರನ್‌ ಗಡಿ ದಾಟಿದ್ದಾರೆ. ಪಂದ್ಯದಲ್ಲಿ ಹ್ಯಾರಿಸ್‌ ರೌಫ್‌ ಎಸೆತಕ್ಕೆ ಆಕರ್ಷಕ ಬೌಂಡರಿ ಬಾರಿಸಿದ ಅವರು, ಈ ಮೈಲಿಗಲ್ಲು ತಲುಪಿದರು.

(ಸುದ್ದಿ ಅಪ್ಡೇಟ್‌ ಆಗಲಿದೆ)

Published by HT Digital Content Services with permission from HT Kannada....