ಭಾರತ, ಮಾರ್ಚ್ 23 -- ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders vs Royal Challengers Bengaluru) ತಂಡವನ್ನು ಅವರದ್ದೇ ತವರಲ್ಲಿ ಮಣಿಸಿ, ಸೀಸನ್ 18ರಲ್ಲಿ ಶುಭಾರಂಭ ಮಾಡಿದೆ. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 59 ರನ್ ಗಳಿಸುವ ಮೂಲಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೇರಿದ್ದ ಅಭಿಮಾನಿಗಳನ್ನು ರಂಜಿಸಿದರು. ಈ ನಡುವೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿದ ಘಟನೆಯೂ ನಡೆದಿದೆ.
ಆರ್‌ಸಿಬಿ ತಂಡದ ಚೇಸಿಂಗ್ ವೇಳೆ ಈ ಘಟನೆ ನಡೆದಿದೆ. 13ನೇ ಓವರ್ ವೇಳೆ ಅಭಿಮಾನಿಯೊಬ್ಬ ತನ್ನ ಆರಾಧ್ಯ ದೈವ ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಮೈದಾನದ ಬಿಗಿ ಭದ್ರತೆಯನ್ನು ಉಲ್ಲಂಘಿಸಿದ್ದಾನೆ. ಮೈದಾನದ ಪಿಚ್‌ಗೆ ನುಗ್ಗಿ ಬಂದ ಆತ, ಬ್ಯಾಟ್ ಹಿಡಿದು ನಿಂತಿದ್ದ ವಿರಾಟ್ ಕೊಹ್ಲಿಯ ಪಾದಗಳನ್ನು ಮುಟ್ಟಿದ್ದಾನೆ. ಅಷ್ಟರಲ್ಲಿ ಮೈದಾನದ ಭದ್ರತಾ ಸಿಬ್ಬಂದಿ ಕೂಡಾ ತ್...
Click here to read full article from source
To read the full article or to get the complete feed from this publication, please
Contact Us.