ಭಾರತ, ಮಾರ್ಚ್ 19 -- 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಕಳಪೆ ಪದರ್ಶನ ನೀಡಿದ್ದ ಹಿನ್ನೆಲೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದ ಬಿಸಿಸಿಐ, ಈಗ ಕುಟುಂಬಕ್ಕೆ ನಿರ್ಬಂಧಿಸಿದ್ದ ನಿಯಮವನ್ನು ಸಡಿಲಿಸಲು ನಿರ್ಧರಿಸಿದೆ. ಅದರಲ್ಲೂ ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಹಿರಂಗವಾಗಿ ಈ ನಿಯಮದ ವಿರುದ್ಧ ಟೀಕೆ ವ್ಯಕ್ತಪಡಿಸುತ್ತಿದ್ದಂತೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಕೊಹ್ಲಿ ಬೆನ್ನಲ್ಲೇ 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಕೂಡ ಬಿಸಿಸಿಐ ನಿರ್ಧಾರಕ್ಕೆ ಕಿಡಿಕಾರಿದ್ದರು. ಕೌಟುಂಬಿಕ ಪ್ರಯಾಣದ ನಿರ್ಬಂಧದ ನಿಯಮ ಬದಲಾಯಿಸುವ ಕುರಿತು ಮರುಪರಿಶೀಲನೆ ನಡೆಸಲು ಬಿಸಿಸಿಐ ಮುಂದಾಗಿದೆ.

ಆಟಗಾರರ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಬಿಜಿಟಿಯಲ್ಲಿ 3-1 ಅಂತರದಲ್ಲಿ ಸರಣಿ ಸೋಲಿನ ಬಳಿಕ ಸಿಟ್ಟಿಗೆದ್ದ ಬಿಸಿಸಿಐ 10 ನಿಯಮಗಳನ್ನು ಜಾರಿಗೆ ತಂದಿತು. ಅದರಲ್ಲಿ ಕುಟುಂಬ ಸದಸ್ಯರಿಗೆ ನಿರ್ಬಂಧ ವಿಧಿಸಿದ್ದೂ ಒಂದು. ವಿದೇಶಿ ಪ್ರವಾಸಗ...