ಭಾರತ, ಏಪ್ರಿಲ್ 3 -- ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗುಂಪು ಹಂತದ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಗಾಯಗೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಗಾಯದ ಕುರಿತು ಆರ್ಸಿಬಿ ಹೆಡ್ಕೋಚ್ ಆ್ಯಂಡಿ ಫ್ಲವರ್ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದರು.
170 ರನ್ಗಳ ಚೇಸಿಂಗ್ ಅವಧಿಯ 12ನೇ ಓವರ್ನಲ್ಲಿ ಸಾಯಿ ಸುದರ್ಶನ್ ಕೃನಾಲ್ ಪಾಂಡ್ಯ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಸ್ವೀಪ್ ಶಾಟ್ ಮಾಡಿದರು. ಬೌಂಡರಿ ಗೆರೆಯಲ್ಲಿ ಚೆಂಡು ತಡೆಯಲು ಯತ್ನಿಸಿದ ಅವಧಿಯಲ್ಲಿ ಕೊಹ್ಲಿ ಬಲಗೈ ಬೆರಳಿಗೆ ತಗುಲಿತು. ಬೆರಳಿಗೆ ತೀವ್ರ ಪೆಟ್ಟಾದ ಬೆನ್ನಲ್ಲೇ ನೋವು ತಾಳಲಾರದೆ ಮೈದಾನದಲ್ಲೇ ಕೂತುಬಿಟ್ಟರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಧಾವಿಸಿ ಕೊಹ್ಲಿ ಗಾಯಗೊಂಡ ಬೆರಳಿಗೆ ಚಿಕಿತ್ಸೆ ಒದಗಿಸಿದರು. ಆದರೆ ಅಭಿಮಾನಿಗಳಿಗೆ ಹ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.