ಭಾರತ, ಮಾರ್ಚ್ 23 -- 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 'ರಾಯಲ್' ಗೆಲುವು ದಾಖಲಿಸಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ 7 ವಿಕೆಟ್​​ಗಳ ಭರ್ಜರಿ ಜಯ ಸಾಧಿಸಿ ಅಭಿಯಾನ ಆರಂಭಿಸಿತು. ಕೆಕೆಆರ್​ ನೀಡಿದ್ದ 175 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ 16.2 ಓವರ್​​ಗಳಲ್ಲೇ ಗುರಿ ಮುಟ್ಟಿತು. ಪಂದ್ಯಕ್ಕೂ ಮುನ್ನ ನಡೆದ ಸಮಾರಂಭದ ವೇಳೆ ವಿರಾಟ್ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡದ ರಿಂಕು ಸಿಂಗು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಪಂದ್ಯದ ಆರಂಭಕ್ಕೂ ಮುನ್ನ ಒಂದು ಗಂಟೆಗಳ ಕಾಲ ಮನರಂಜನಾ ಕಾರ್ಯಕ್ರಮ ನಡೆಯಿತು. ಬಾಲಿವುಡ್ ನಟಿ ದಿಶಾ ಪಟಾನಿ, ಗಾಯಕರಾದ ಶ್ರೇಯಾ ಘೋಷಾಲ್, ಕರಣ್, ಔಜ್ಲಾ ಅವರು ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಮೈದಾನದಲ್ಲಿ ನೆರದಿದ್ದ ಕ್ರಿಕೆಟ್ ಪ್ರಿಯರನ್ನು ರಂಜಿಸಿದರು. ಈ ಅದ್ಧೂರಿ ಸಂಭ್ರಮಾಚರಣೆಯ ಸಂಗೀತ ವೈಭವದ ನಂತರ ನಿರೂಪಣೆ ಮಾಡಿದ ಬಾಲಿವುಡ್ ...