ಭಾರತ, ಮಾರ್ಚ್ 27 -- ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಭಾರಂಭ ಮಾಡಿದೆ. ಶನಿವಾರ (ಮಾ.22) ಐಪಿಎಲ್‌ 18ರ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದ ನಂತರ ಆರ್‌ಸಿಬಿ ತಂಡ ಭಾರಿ ಉತ್ಸಾಹದಲ್ಲಿದೆ. ಕಳೆದ ವರ್ಷ ಪ್ಲೇಆಫ್‌ಗೆ ಅರ್ಹತೆ ಪಡೆದ ನಾಲ್ಕು ತಂಡಗಳಲ್ಲಿ ಒಂದಾದ ಆರ್‌ಸಿಬಿ, ಚಾಂಪಿಯನ್‌ ತಂಡವನ್ನೇ ಮಣಿಸಿದ್ದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆವೃತ್ತಿಯ ಎರಡನೇ ಪಂದ್ಯಕ್ಕೂ ಮುನ್ನ ಆಟಗಾರರು ವಿಶ್ರಾಂತಿ ಮತ್ತು ಸಂಭ್ರಮಾಚರಣೆಗಾಗಿ ತುಸು ಸಮಯ ಕಳೆದಿದ್ದಾರೆ. ಎರಡನೇ ಪಂದ್ಯದ ನಡುವೆ ಆರು ದಿನಗಳ ಅಂತರವಿರುವುದರಿಂದ, ಆರ್‌ಸಿಬಿ ಶಿಬಿರವು ವಿವಿಧ ವಿನೋದ ಚಟುವಟಿಕೆಗಳಲ್ಲಿ ತೊಡಗಿತ್ತು. ಈ ನಡುವೆ ಒಂದು ಮಜವಾದ ಘಟನೇ ನಡೆದಿದೆ.

ಆರ್‌ಸಿಬಿ ಫ್ರಾಂಚೈಸಿಯು ಸ್ವಸ್ತಿಕ್ ಚಿಕಾರ ಎಂಬ ಯುವ ಆಟಗಾರನನ್ನು 30 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿತ್ತು. ಈ ಯುವ ಆಟಗಾರ ಬೇರೆ ಯಾವೊಬ್ಬ ಆಟಗಾರ ಮಾಡದ ಕೆಲಸ ಮಾಡಿದ್ದಾರೆ. ಇದು ವಿರಾಟ್‌ ಅರೊಂದಿಗೆ...