ಭಾರತ, ಮಾರ್ಚ್ 11 -- ಇದು ಸೌರವ್ ಗಂಗೂಲಿ 2008ರ ಅಕ್ಟೋಬರ್ 7ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್​​ಗಳ ಮೊದಲ ಪಂದ್ಯ ಪ್ರಾರಂಭಕ್ಕೆ 2 ದಿನಗಳ ಮೊದಲು. ಅಂದು ಪತ್ರಿಕಾಗೋಷ್ಠಿ ನಾಟಕೀಯವಾಗಿ ಕೊನೆಗೊಂಡಿತ್ತು. ಅವತ್ತು ನಾಯಕ ಆಕರ್ಷಕ ಮುಗುಳ್ನಗೆ ಬೀರಿ ಪ್ರಶ್ನೆಗಳಿಗೆ ಉತ್ತರಿಸದೆ ಹೊರನಡೆದರು. ಅಂದು ಪತ್ರಕರ್ತರು ಕೇಳಿದ್ದು ಸೌರವ್ ಗಂಗೂಲಿ ಭವಿಷ್ಯದ ಕುರಿತು! ಇಂತಹದ್ದೇ ಪ್ರಶ್ನೆ ರೋಹಿತ್​ ಶರ್ಮಾಗೂ ಎದುರಾಗಿತ್ತು. ಅದಕ್ಕೀಗ ಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ. ವದಂತಿ ಹಬ್ಬಿಸುವವರಿಗೂ ಚಾಟಿ ಬೀಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಮುಂದೆ ಯಾವುದೇ ವದಂತಿಗಳು ಹರಡದಂತೆ ನೋಡಿಕೊಳ್ಳಲು ನಾನು ಈ ಫಾರ್ಮಾಟ್​ನಿಂದ ನಿವೃತ್ತಿ ಹೊಂದುವುದಿಲ್ಲ ಎಂಬುದು ರೋಹಿತ್​ ಮಾತಾಗಿತ್ತು. ಮಾರ್ಚ್ 9ರ ಭಾನುವಾರ ಭಾರತ ತಂಡವನ್ನು ದಾಖಲೆಯ 3ನೇ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಗೆ ಮುನ್ನಡೆಸಿದ ಒಂದು ಗಂಟೆಯ ನಂತರ ರೋಹಿತ್ ಹೀಗೆ ಹೇಳಿದ್ದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂ...