ಭಾರತ, ಮಾರ್ಚ್ 10 -- ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್​ಗಳಿಂದ ಸೋಲಿಸಿದ ಭಾರತ ಐತಿಹಾಸಿಕ ಮೂರನೇ ಟ್ರೋಫಿ ಗೆದ್ದುಕೊಂಡಿತು. ಭಾರತದ ಗೆಲುವಿನ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅವರು ನಿವೃತ್ತಿ ಘೋಷಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ ರೋಹಿತ್ ಮತ್ತು ವಿರಾಟ್ ಗೆಲುವಿನ ನಂತರವೇ ಊಹಾಪೋಹಗಳಿಗೆ ತೆರೆ ಎಳೆದರು. ಆದರೆ, 36 ವರ್ಷದ ಜಡೇಜಾ ಅವರ ಭವಿಷ್ಯದ ಯೋಜನೆಯ ಬಗ್ಗೆ ವದಂತಿಗಳು ಮುಂದುವರೆದಿದ್ದವು. ಇದೀಗ ಸ್ಟಾರ್ ಆಲ್​​ರೌಂಡರ್ ಜಡೇಜಾ ಕೂಡ ನಿವೃತ್ತಿ ಊಹಾಪೋಹಗಳ ಬಗ್ಗೆ ಮೌನ ಮುರಿದಿದ್ದಾರೆ.

ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿರುವ ಜಡೇಜಾ, ಈ ಸಮಯದಲ್ಲಿ ನಿವೃತ್ತಿ ಹೊಂದುವ ಯಾವುದೇ ಯೋಜನೆ ಇಲ್ಲ ಎಂಬ ಸುಳಿವು ಕೊಟ್ಟಿದ್ದಾರೆ. ವದಂತಿಗಳಿಗೆ ಗಮನ ನೀಡದಂತೆ ತಮ್ಮ ಅಭಿಮಾ...