ಭಾರತ, ಜುಲೈ 20 -- ವಿಯೆಟ್ನಾಂನಲ್ಲಿ ಪ್ರವಾಸಿಗರು ತುಂಬಿದ್ದ ದೋಣಿಯೊಂದು ಮಗುಚಿದ ಪರಿಣಾಮ 34 ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 8 ಮಂದಿ ನಾಪತ್ತೆಯಾಗಿದ್ದಾರೆ. ಶನಿವಾರ (ಜುಲೈ 20) ಈ ಘಟನೆ ಸಂಭವಿಸಿದ್ದು, ಗುಡುಗು ಸಹಿತ ಮಳೆಯ ಪರಿಣಾಮ ದೋಣಿ ಮಗುಚಿದೆ ಎಂದು ಹೇಳಲಾಗುತ್ತಿದೆ.

ದಿ ವಂಡರ್ ಸೀ ಎಂಬ ಹೆಸರಿನ ದೋಣಿಯಲ್ಲಿ ಸುಮಾರು 48 ಮಂದಿ ಪ್ರಯಾಣಿಕರಿದ್ದರು. 5 ಮಂದಿ ಸಿಬ್ಬಂದಿಗಳು ಹಾಗೂ ಉಳಿದವರೆಲ್ಲಾ ವಿಯೆಟ್ನಾಂ ನಿವಾಸಿಗಳು ಎಂದು ಹೇಳಲಾಗುತ್ತಿದೆ.

ವಿಯೆಟ್ನಾಂ ದೇಶದ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಹಾ ಲಾಂಗ್ ಕೊಲ್ಲಿಯಲ್ಲಿ ಪ್ರವಾಸಿಗರು ದೋಣಿ ವಿಹಾರ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬೀಸಿದ ಬಲವಾದ ಗಾಳಿ ಹಾಗೂ ಚಂಡಮಾರುತ ಹಡಗನ್ನು ತಲೆ ಕೆಳಗಾಗಿಸಿತ್ತು.

ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗಿದ್ದು 11 ಜನರನ್ನು ರಕ್ಷಿಸಲಾಗಿದೆ. 27 ಶವಗಳನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ. ದೋಣಿಯಲ್ಲಿ 20 ಮಕ್ಕಳಿದ್ದು, 14 ವರ್ಷದ ಬಾಲಕ ಘಟನೆ ನಡೆದು 4 ಗಂಟೆಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾನೆ.

t...