Bangalore, ಮಾರ್ಚ್ 10 -- ಅಮೆರಿಕಾ, ಚೀನಾ ದೇಶದಲ್ಲಿ ಬಿಡಿ. ಅಲ್ಲಿ ಭದ್ರತೆಗೆ ಇನ್ನಿಲ್ಲದ ಒತ್ತು ನೀಡಲಾಗುತ್ತದೆ. ಭಾರತವೂ ಕೂಡ ಹಲವು ಅನಾಹುತಗಳ ನಂತರ ಭದ್ರತೆಯ ಚಿತ್ರಣವನ್ನೇ ಬದಲಿಸಿದೆ. ಭಾರತದಲ್ಲಿ ವಿಮಾನ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಕ್ರಿಕೆಟ್‌, ಅತೀ ಗಣ್ಯರ ಕಾರ್ಯಕ್ರಮವಿದ್ದರೆ ಭದ್ರತೆ ಎಷ್ಟು ಬಿಗಿಯಾಗಿರುತ್ತದೆ ಎಂದರೆ ಅಲ್ಲಿ ತಪ್ಪಿಸಿಕೊಳ್ಳುವುದು ಕಷ್ಟವೇ. ಲೋಹ ಪತ್ತೆ ಯಂತ್ರಗಳು ಏನೇ ಇದ್ದರೂ ಪತ್ತೆ ಮಾಡಿ ಹಾಕುತ್ತವೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಆಧರಿತ ಭಾರತದಲ್ಲೂ ಬಂದು ದಶಕಗಳೇ ಕಳೆದಿವೆ. ಈಗ ಅವು ಸುಧಾರಿಸಿವೆ. ತಂತ್ರಜ್ಞಾನದ ಜತೆಯಲ್ಲಿಯೇ ಭಾರತದಲ್ಲಿ ಭದ್ರತಾ ವ್ಯವಸ್ಥೆಯೂ ಬಲಗೊಂಡಿದೆ. ಇದಕ್ಕೆಂದೇ ಪ್ರತ್ಯೇಕ ಶಿಷ್ಟಾಚಾರಗಳಿವೆ. ತಂತ್ರಜ್ಞಾನ ಹಾಗೂ ಶಿಷ್ಟಾಚಾರ ವ್ಯವಸ್ಥೆ ಬಿಗಿ ಇದ್ದರೂ ಅನಾಹುತಗಳು ಕೆಲವೊಮ್ಮೆ ಆಗಿಬಿಡಬಹುದು. ಲೋಹಪತ್ತೆ ಯಂತ್ರ ಹಾಗೂ ಸಿಬ್ಬಂದಿ ತಪ್ಪಿಸಿಯೂ ಕೋಟಿಗಟ್ಟಲೇ ಬೆಲೆ ಬಾಳುವ ಚಿನ್ನವನ್ನು ಭಾರತಕ್ಕೆ ಹೇಗೆ ತರುತ್ತಾರೆ ನೋಡಿ.

ಕರ್ನಾಟಕದಲ್ಲಿ ನಟಿ ಹಾಗೂ ಡಿಜಿಪಿ ...