ಭಾರತ, ಫೆಬ್ರವರಿ 11 -- ಬೆಂಗಳೂರು: ಜೀವನದಲ್ಲೊಮ್ಮೆ ವಿಮಾನವೇರಿ ಅದರಲ್ಲಿ ಕುಳಿತು ಊಟೋಪಹಾರ ಸೇವಿಸಬೇಕು ಎಂಬ ಆಸೆ ಇತ್ತೆಂದರೆ ಈಗ ಪೂರೈಸೋದು ಬಹಳ ಸುಲಭ. ಇದಕ್ಕಾಗಿ ವಿಮಾನದಲ್ಲಿ ಪ್ರಯಾಣಿಸಬೇಕಾಗಿಲ್ಲ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದರೆ ಸಾಕು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆದಿದೆ. ಶ್ರೀಹರಿ ಕಾರಂತ ಎಂಬುವವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಅವರು "ಟೈಗರ್ ಏರೋ ರೆಸ್ಟೋರೆಂಟ್‌" ಬಗ್ಗೆ ಮಾಹಿತಿ ನೀಡಿದ್ದಾರೆ.

'ಟೈಗರ್ ಏರೋ ರೆಸ್ಟೋರೆಂಟ್' ಗ್ರಾಹಕರಿಗೆ ನೈಜ ವಿಮಾನಕ್ಕೆ ಕಾಲಿಡಲು ಅನುವು ಮಾಡಿಕೊಡುತ್ತದೆ. ಆಸನ ವ್ಯವಸ್ಥೆಗಳು ವಿಮಾನಯಾನ ಅನುಭವವನ್ನು ಅನುಕರಿಸುತ್ತವೆ. ವಿಮಾನದ ಥೀಮ್ ಹೊಂದಿರುವ ರೆಸ್ಟೋರೆಂಟ್ ಆದರ ಕಾರಣ, ಆಸನ ಕಾಯ್ದಿರಿಸುವಿಕೆ, ಬೋರ್ಡಿಂಗ್ ಪಾಸ್ ಮುಂತಾಗಿ ಎಲ್ಲವೂ ವಿಮಾನ ಏರುವ ಅನುಭವವನ್ನೇ ನೀಡುತ್ತವೆ ಎಂದು ಅವರು ವಿವರಿಸಿದ್ದಾರೆ.

'ಟೈಗರ್ ಏರೋ ರೆಸ್ಟೋರೆಂಟ್' ಹೊರ ನೋಟಕ್ಕೂ ವಿಮಾನವೇ ಆಗಿದ್ದು, ಒಳಾಂಗಣದಲ್ಲೂ ವಿಮಾನದ ವಿನ್ಯಾಸವನ್ನ...