ಭಾರತ, ಮಾರ್ಚ್ 29 -- ಬೆಂಗಳೂರು: ಬಿಗ್‌ಬಾಸ್‌ ಕನ್ನಡದ ಮಾಜಿ ಸ್ಪರ್ಧಿಗಳಾದ ರಜತ್‌ ಕಿಶನ್‌ ಮತ್ತು ವಿನಯ್‌ ಗೌಡರಿಗೆ ನಿನ್ನೆ 24ನೇ ಎಸಿಎಂಎಂ ಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇವರಿಬ್ಬರು ಇಂದು ಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಿನ್ನೆ ಜಾಮೀನು ಸಿಕ್ಕರೂ ಸಮಯಕ್ಕೆ ಸರಿಯಾಗಿ ಜಾಮೀನು ಆದೇಶ ಪ್ರತಿ ತಲುಪದ ಕಾರಣ ನಿನ್ನೆ ರಾತ್ರಿ ಇವರಿಬ್ಬರು ಜೈಲಿನಲ್ಲಿಯೇ ಕಾಲ ಕಳೆದಿದ್ದಾರೆ. ಇಂದು ಬೆಳಗ್ಗೆ ನಗುನಗುತ್ತಾ ಹೊರಗೆ ಬಂದಿದ್ದಾರೆ.

ಜೈಲಿನಿಂದ ಇವರು ಹೊರಬಂದಾಗ ಹೊರಗಿದ್ದ ಮಾಧ್ಯಮಗಳ "ಮಾತನಾಡೋಣ್ವ" ಎಂದು ಕೇಳಿದ್ದಾರೆ. ಅದಕ್ಕೆ ವಿನಯ್‌, ಮಾತನಾಡೋಣ, ಆರಾಮ್ಸೆ ಕುಳಿತು ಮಾತನಾಡೋಣ ಎಂದು ಹೇಳಿದ್ದಾರೆ. ರೀಲ್ಸ್‌ ಮಾಡುವಾಗ ಇವರಿಬ್ಬರು ಮಚ್ಚು ಹಿಡಿದುಕೊಂಡು ವಿಡಿಯೋ ಶೂಟ್‌ ಮಾಡಿದ್ದರು. ಇವರಿಬ್ಬರ ಮೇಲೆ ಶಸ್ತ್ರಾಸ್ತ್ರ ಕಾಯಿದೆಯಡಿ ಕೇಸ್‌ ದಾಖಲಿಸಲಾಗಿತ್ತು. ವಿಚಾರಣೆ ವೇಳೆ ಇವರು ಫೈಬರ್‌ ಮಚ್ಚು ನೀಡಿದ್ದರು. ಆದರೆ, ನಿಜವಾದ ಮಚ್ಚಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ...