Bengaluru, ಮೇ 12 -- ದೂರದ ಉಡುಪಿ ಬಳಿಯ ಸಣ್ಣ ಹಳ್ಳಿಯಿಂದ ಬಂದಿದ್ದ 33ರ ಪ್ರಾಯದ ಹಾಸ್ಯ ನಟ ರಾಕೇಶ್‌ ಪೂಜಾರಿ, ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನ ಮನೆ ಮಾತಾದರು. ಸಿನಿಮಾ, ಸೀರಿಯಲ್‌ಗಳಲ್ಲಿ ಸಾಲು ಸಾಲು ಅವಕಾಶ ಪಡೆಯುತ್ತ ಹೋದರು. ಸಂಪಾದನೆಯ ಜತೆಗೆ ಖ್ಯಾತಿಯೂ ಅವರನ್ನು ಅಲಂಕರಿಸಿತು. ನಿರೀಕ್ಷೆಗೂ ಮೀರಿ ಬೆಳೆಯುತ್ತ ಹೋದರು. ಆದರೆ, ಇದೀಗ ಹಠಾತ್‌ ಸಾವು ಅವರನ್ನು ಇಲ್ಲವಾಗಿಸಿದೆ. ಆಪ್ತಬಳಗದ ಪ್ರಕಾರ ಕೆಲವರು ಲೋ ಬಿಪಿಯಿಂದಾಗಿ, ಇನ್ನು ಕೆಲವರು ಹೃದಯಾಘಾತದಿಂದ ರಾಕೇಶ್‌ ಪೂಜಾರಿ ಅಸುನೀಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಎಲ್ಲರಿಗೂ ಬೇಕಾದ ಜೀವ ಕಣ್ಮುಚ್ಚಿದೆ. ಸ್ನೇಹ ಬಳಗ ಕಣ್ಣೀರಲ್ಲಿದೆ. ಇದೆಲ್ಲದರ ನಡುವೆ, ತಮ್ಮ ಸಾವಿನ ಬಗ್ಗೆ ರಾಕೇಶ್‌ಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ? ಹೀಗಿದೆ ನೋಡಿ ವಿವರ.

ಸಾವೇ ಹಾಗೆ. ಅದಕ್ಕೆ ವಯಸ್ಸಿನ ಹಂಗಿಲ್ಲ. ಬಡವ ಶ್ರೀಮಂತ ಅನ್ನೋ ಬೇಧ ಭಾವವಿಲ್ಲ. ಅದು ಬರ್ತಾಯಿದ್ದಂತೆ, ಹೋಗುವುದೊಂದೆ ನಮ್ಮ ಕಾಯಕ. ಇದೀಗ ಚಿಕ್ಕ ವಯಸ್ಸಿನ ರಾಕೇಶ್‌ ಪೂಜಾರಿ ಬಾಳಿನಲ್ಲಿಯೂ ಆ...