ಭಾರತ, ಮಾರ್ಚ್ 3 -- ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳ ಭಾನುವಾರ ತೆರೆ ಕಂಡಿದೆ. ಮೂರು ದಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಸೋಮವಾರ (ಮಾ.3) ಪುಸ್ತಕ ಮೇಳದಲ್ಲಿ ಶಾಸಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಕಳೆದ ಮೂರು ದಿನಗಳಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಪುಸ್ತಕ ಮೇಳಕ್ಕೆ ಆಗಮಿಸಿದ್ದರು. ಸಾರ್ವಜನಕರ ಪ್ರವೇಶಕ್ಕೆ ಭಾನುವಾರ ಕೊನೆಯ ದಿನವಾಗಿದ್ದ ಕಾರಣ, ಜನಜಾತ್ರೆಯೇ ನಿರ್ಮಾಣವಾಗಿತ್ತು.

ಬೆಂಗಳೂರು ಮಾತ್ರವಲ್ಲದೆ ಪಕ್ಕದ ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಹೀಗೆ ಹೊರ ಜಿಲ್ಲೆಗಳಿಂದಲೂ ಜನರು ಬಂದಿದ್ದರು.

151 ಪುಸ್ತಕಗಳ ಮಳಿಗೆಗಳಿಗೂ ಜನರು ಭೇಟಿ, ಆಸಕ್ತರು ತಮ್ಮ ನೆಚ್ಚಿನ ಪುಸ್ತಕಗಳನ್ನು ಖರೀದಿಸಿ ಖುಷಿಪಟ್ಟರು.

ಪುಸ್ತಕಮೇಳದ ಬಗ್ಗೆ ಮಾತನಾಡಿದ ಸ್ಪೀಕರ್ ಯುಟಿ ಖಾದರ್‌, ಈವರೆಗೆ ಅಂದಾಜು 2 ಲಕ್ಷ ಜನ ಪುಸ್ತಕ ಮೇಳಕ್ಕೆ ಭೇಟಿ ನೀಡಿದ್ದಾರೆ. ಕೊನೆಯ ಒಂದು ದಿನದಲ್ಲೇ 1 ಲಕ್ಷಕ್ಕೂ ಅಧಿಕ ಜನ ಭಾಗಿಯಾಗಿದ್ದಾರೆ ಎಂದ...