ಭಾರತ, ಮಾರ್ಚ್ 19 -- ಕಾನ್ಪುರ: ಭಾರತದ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸೋಮವಾರ ಕಾನ್ಪುರ ಮತ್ತು ಪ್ರಯಾಗ್‌ರಾಜ್ ನಡುವೆ ಲೆಹೆಂಗಾದ ಕಾರಣದಿಂದ ಮಧ್ಯದಲ್ಲೇ ನಿಂತಿತು. ಹೌರಾ ಮಾರ್ಗದ ಶಾಂತಿ ನಗರ ಕ್ರಾಸಿಂಗ್ (ಗೇಟ್ ಸಂಖ್ಯೆ 82) ಬಳಿಯ ರೈಲ್ವೆ ಹಳಿಯಲ್ಲಿ OHE ನಲ್ಲಿ ಲೆಹೆಂಗಾ ಸಿಲುಕಿಕೊಂಡಿರುವುದನ್ನು ನೋಡಿದ ಚಾಲಕ ಬ್ರೇಕ್ ಹಾಕಿದನು. ರೈಲು ನಿಲ್ಲಿಸಿದ ತಕ್ಷಣ ಓಎಚ್‌ಇನಲ್ಲಿ ಏನೋ ಸಿಲುಕಿದೆ ಎಂದು ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿತ್ತು. ಚಾಲಕನಿಂದ ಮಾಹಿತಿ ಬಂದ ತಕ್ಷಣ ಕೆಲ ಕಾಲ ಅಲ್ಲಿ ಗೊಂದಲ ಉಂಟಾಗಿತ್ತು. ನಿಲ್ದಾಣದ ಸೂಪರಿಂಟೆಂಡೆಂಟ್ ಕೂಡ ಸ್ಥಳಕ್ಕೆ ಬಂದು ಲೆಹೆಂಗಾ ತೆಗದು ಹಾಕಿ, ರೈಲು ಮುಂದಕ್ಕೆ ಚಲಿಸಲು ಅವಕಾಶ ಮಾಡಿಕೊಟ್ಟರು. ಈ ಘಟನೆಯಿಂದಾಗಿ ಸುಮಾರು 20 ನಿಮಿಷಗಳ ಕಾಲ ರೈಲು ಅಲ್ಲೇ ನಿಲ್ಲುವಂತಾಯಿತು.

ಸೋಮವಾರ (ಮಾರ್ಚ್ 17) ದೆಹಲಿ-ವಾರಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ಬೆಳಿಗ್ಗೆ 10.31 ರ ಸುಮಾರಿಗೆ ಕಾನ್ಪುರ ಸೆಂಟ್ರಲ್‌ನಿಂದ ಪ್ರಯಾಗ್‌ರಾಜ್‌ ಕಡೆಗೆ ಹೊರಟಿತು. ಸೆಂಟ್ರಲ್‌...