Bangalore, ಏಪ್ರಿಲ್ 25 -- ನೀವು ಜನರಿಗೆ ಉಚಿತವಾಗಿ ನೀಡುತ್ತೀದ್ದೀರಿ, ಜನರೇನು ಉಚಿತವಾಗಿ ವಿದ್ಯುತ್‌ ಕೊಡಿ ಎಂದು ಕೇಳಿದ್ದರಾ, ಈಗ ಪ್ರೀಪೇಯ್ಡ್ ಸ್ಮಾರ್ಟ್‌ಮೀಟರ್‌ ಹೆಸರಿನಲ್ಲಿ ಭಾರೀ ಶುಲ್ಕು ವಸೂಲಿ ಮಾಡುತ್ತಿದ್ದೀರಿ, ಬಡವರಿಂದ ಇಷ್ಟು ಹಣ ಕಿತ್ತುಕೊಂಡರೆ ಅವರು ಎಲ್ಲಿಗೆ ಹೋಗಬೇಕು. ಎಲ್ಲರೂ ಸ್ಮಾರ್ಟ್ ಮೀಟರ್ ಹಾಕಬೇಕೆಂದರೆ ಬಡವರೇನು ಏನು ಮಾಡಬೇಕು ಎಂದು ನೀವೇ ಹೇಳಿ. ಕೂಡಲೇ ಸ್ಮಾರ್ಟ್‌ ಮೀಟರ್‌ಗೆ ದುಬಾರಿ ಶುಲ್ಕ ಹಾಕುವುದನ್ನು ನಿಲ್ಲಿಸಿ. ಗ್ರಾಹಕರಿಗೆ ಅನಗತ್ಯ ಹೊರೆ ತಪ್ಪಿಸಿ. ಇದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ( Bescom)ಗೆ ಕರ್ನಾಟಕ ಹೈಕೋರ್ಟ್‌ ನೀಡಿದ ತಪರಾಕಿ. ಬೆಸ್ಕಾಂನ ಪ್ರೀಪೇಯ್ಡ್ ಮೀಟರ್ ಶುಲ್ಕ‌ಕ್ಕೆ ಮಧ್ಯಂತರ ತಡೆ ಆದೇಶ ಹೊರಡಿಸಿದ್ದು. ಬೆಂಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ರಾಮನಗರ ಸಹಿತ ಎಂಟು ಜಿಲ್ಲೆಗಳ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

Published by HT Digital Content Services with permission from HT Kannada....